ಹಳಿಯಾಳ: ಖಾನಾಪುರದ ಅಸ್ಲಾಂ ಹಟಿಲಸಾಬ್ ಎಂಬಾತ ಹಳಿಯಾಳದಲ್ಲಿ ಸೆಂಟ್ರಿoಗ್ ಕೆಲಸ ಮಾಡಿಕೊಂಡಿದ್ದು, ಆತ ಖರೀದಿಸಿದ್ದ ಸ್ಟೀಲ್ ಬಂಡಲ್\’ನ್ನು ಕಳ್ಳರು ಅಪಹರಿಸಿದ್ದಾರೆ.
ಜೂ 1ರಂದು ಕುರಿಗದ್ದಾ ಗ್ರಾಮದ ನೀರಿನ ಟಾಕಿ ಬಳಿ ಅಸ್ಲಾಂ 7 ಸ್ಟೀಲ್ ಬಂಡಲ್ ಇರಿಸಿ ಬೇರೆ ಕಡೆ ಕೆಲಸಕ್ಕೆ ಹೋಗಿದ್ದ. ಜೂ 3ರಂದು ಅಲ್ಲಿ ಬಂದು ನೋಡಿದಾಗ ಆತ ಇರಿಸಿದ್ದ ಸಾಮಗ್ರಿ ಯಾವುದು ಇರಲಿಲ್ಲ. ಅಕ್ಕ-ಪಕ್ಕದಲ್ಲಿ ವಿಚಾರಿಸಿದಾಗಲೂ ಯಾವುದೇ ಮಾಹಿತಿ ಗೊತ್ತಾಗಿಲ್ಲ. ಇದರಿಂದ 20 ಸಾವಿರ ರೂ ನಷ್ಟ ಅನುಭವಿಸಿದ ಆತ ಇದೀಗ ಪೊಲೀಸ್ ದೂರು ನೀಡಿದ್ದಾನೆ.