ಅಂಕೋಲಾ: ಅನುಭವಿ ಶಿಕ್ಷಕರ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡುತ್ತಿರುವ `ಟೀಚರ್ ಸಂಸ್ಥೆ\’ ಹಿಮಾಲಯ ಕಾಲೇಜಿನ ವಿಜ್ಞಾನ ವಿದ್ಯಾರ್ಥಿಗಳಿಗೆ ವಾರದಲ್ಲಿ ಒಂದು ದಿನ ತರಬೇತಿ ನೀಡಲು ಉದ್ದೇಶಿಸಿದೆ.
ಈ ಕುರಿತಾದ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ದೊರೆತಿದ್ದು, ಟೀಚರ್ ಸಂಸ್ಥೆಯ ಅಭಿರಾಮ್ `ಕೆಸಿಇಟಿ ಹಾಗೂ ನೀಟ್\’ ತರಬೇತಿಯ ಉದ್ದೇಶಗಳ ಬಗ್ಗೆ ತಿಳಿಸಿದರು. ಡಾ. ನೀತಿನ್ ಹೊಸಮಾಲೆಕರ್, ಡಾ ವಸಂತ ಶಾಸ್ತ್ರಿ, ಎಂ ಐ ಮಹಾಲೆ, ಅಣ್ಣಪ್ಪ ನಾಯ್ಕ ಇತರರು ಇದ್ದರು.