ಹೊನ್ನಾವರ: ಹೊಸಕಾಳಿ ಮುಡಾರೆಯ ಮಾಬ್ಲೇಶ್ವರ ಸುಬ್ಬಾ ಹೆಗಡೆ (61) ಕಾಣೆಯಾಗಿದ್ದಾರೆ.
ರೈತರಾಗಿದ್ದ ಅವರು ಜುಲೈ 1ರಂದು ಬೆಳಗ್ಗೆ ಮನೆಯಲ್ಲಿದ್ದ ಅವರು ಮಧ್ಯಾಹ್ನದ ವೇಳೆ ಕಣ್ಮರೆಯಾಗಿದ್ದಾರೆ. ಮೂರೂ ದಿನಗಳ ಕಾಲ ತಂದೆಯನ್ನು ಹುಡುಕಿದ ಅವರ ಪುತ್ರ ವಿನಯಕ ಹೆಗಡೆ, ಇದೀಗ ಅವರನ್ನು ಹುಡುಕಿಕೊಡಿ ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.