
ಭಟ್ಕಳ: ಶಿರಾಲಿಯ ಗಣಪತಿ ನಾಯ್ಕ ಎಂಬಾತ 8 ವರ್ಷದ ಅಗಸ್ತ ದೇವಾಡಿಗ ಎಂಬಾತನಿಗೆ ಬೈಕ್ ಗುದ್ದಿದ್ದಾನೆ.
ಜುಲೈ 4ರಂದು ಚಿತ್ರಾಪುರ ಕಡೆಯಿಂದ ಶಿರಾಲಿ ಕಡೆ ಬರುತ್ತಿದ್ದ ಗಣಪತಿ ನಾಯ್ಕ ಅಂಚೆ ಕಚೇರಿ ಬಳಿ ರಸ್ತೆ ದಾಟಲು ನಿಂತಿದ್ದ ಅಗಸ್ತನಿಗೆ ಗುದ್ದಿದ್ದು, ಇದರಿಂದ ಬಾಲಕನ ತೊಡೆ, ಕೈ-ಕಾಲುಗಳಿಗೆ ಗಾಯವಾಗಿದೆ. ಬೈಕ್ ಸವಾರನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಕುಪ್ಪಾ ದೇವಾಡಿಗ ಪೊಲೀಸ್ ದೂರು ನೀಡಿದ್ದಾರೆ.