ಕಾರವಾರದ ಜಾಂಬಾ – ಬೇಳೂರು ಸಂಪರ್ಕ ಸಾಧಿಸಲು 2.5 ಕೋಟಿ ವೆಚ್ಚದಲ್ಲಿ ಡಾಂಬರ್ ರಸ್ತೆ ನಿರ್ಮಿಸಲಾಗಿದ್ದು, ಉದ್ಘಾಟನೆಗೂ ಮುನ್ನವೇ ಈ ರಸ್ತೆ ಮಾರ್ಗದಲ್ಲಿ ಬರುವ ಎರಡು ಸೇತುವೆ ಕುಸಿದಿದೆ.
ಕಡವಾಡ ಗ್ರಾ ಪಂ ವ್ಯಾಪ್ತಿಯ ಈ ರಸ್ತೆಗೆ ಅಡ್ಡಲಾಗಿದ್ದ ಸಣ್ಣ-ಪುಟ್ಟ ಹಳ್ಳಗಳಿಗೆ ಒಟ್ಟು 5 ಕಿರು ಸೇತುವೆಗಳನ್ನು ನಿರ್ಮಿಸಲಾಗಿದೆ. ಸುರಿದ ಮಳೆಗೆ ಸೇತುವೆ ಬುಡದಲ್ಲಿನ ಮಣ್ಣು ಕೊಚ್ಚಿಹೋಗಿದೆ. ಸೇತುವೆ ಬುಡದಲ್ಲಿ ಕಲ್ಲು ಮಿಶ್ರಿತ ಮಣ್ಣು ಹಾಕದಿರುವುದು ಹಾಗೂ ಅಗತ್ಯವಿರುವಷ್ಟು ಸಿಮೆಂಟ್ ಬಳಸದಿರುವುದು ಸೇತುವೆ ಕುಸಿತಕ್ಕೆ ಕಾರಣ ಎಂದು ಜನ ದೂರಿದ್ದಾರೆ. ಲೋಕೋಪಯೋಗಿ ಇಲಾಖೆಯಿಂದ ಈ ಕಾಮಗಾರಿ ನಡೆಸಲಾಗಿತ್ತು.