ಭಟ್ಕಳ: ಐಷಾರಾಮಿ ವಾಹನಗಳ ಪಟ್ಟಿಯಲ್ಲಿರುವ `ಯಮಹಾ ಎಂ ಟಿ – 15\’ ಹಾಗೂ ಸಾದಾ ಸೀದಾದ ಟಿವಿಎಸ್ ಸ್ಕೂಟರ್ ನಡುವೆ ಅಪಘಾತ ನಡೆದಿದ್ದು, ಈ ಅಪಘಾತದಲ್ಲಿ `ಯಮಹಾ ಎಂ ಟಿ – 15\’ ಓಡಿಸುತ್ತಿದ್ದ ಲಕ್ಷ್ಮೀಶ ನಾಯ್ಕ (26) ಎಂಬಾತರಿಗೆ ಗಾಯವಾಗಿದೆ.
ಶಿರಾಲಿ ವೆಂಕಟಾಪುರ ಲಕ್ಷ್ಮೀಶ ನಾಯ್ಕ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಾರೆ. ಅವರು ಜುಲೈ 4ರಂದು ಶಿರಾಲಿಯಿಂದ ಭಟ್ಕಳಕ್ಕೆ ಬೈಕ್ ಮೂಲಕ ಬರುತ್ತಿದ್ದಾಗ `ಹಳೆ ಸಿಟಿ ಲೈಟ್\’ ಹೋಟೆಲ್ ಬಳಿ ಅಪಘಾತವಾಗಿದೆ. ಭಟ್ಕಳದ ಬುಡನ್ ಸಾಬ್ ಪಿಂಜಾರ್ ಎಂಬಾತ ತನ್ನ ಟಿವಿಎಸ್ ಸ್ಕೂಟರ್\’ನ್ನು ಲಕ್ಷ್ಮೀಶರ ಬೈಕಿಗೆ ಗುದ್ದಿದ್ದರಿಂದ ಕೈ, ಕಾಲು, ತಲೆ, ಮೂಗಿ ಹಾಗೂ ಹೊಟ್ಟೆಗೆ ಗಾಯವಾಗಿದೆ.