ಯಲ್ಲಾಪುರ: ಬಾಳಗಿಮನೆ ಶಾಲೆಯ ಬಳಿ ಅಡ್ಡಾದಿಡ್ಡಿ ಟ್ಯಾಂಕರ್ ಓಡಿಸಿದ ಮಹಾಂತೇಶ ಗೌಂಡರ್ ಎಂಬಾತ ಕಾರು ಹಾಗೂ ಬೈಕಿಗೆ ತನ್ನ ವಾಹನ ಗುದ್ದಿ ಉದ್ದಟತನ ಮೆರೆದಿದ್ದಾನೆ.
ಬಾದಾಮಿಯ ಮಹಾಂತೇಶ ಗೌಂಡರ್ ಅಂಕೋಲಾ ಕಡೆಯಿಂದ ಟ್ಯಾಂಕರ್ ಓಡಿಸಿಕೊಂಡು ಬಂದಿದ್ದು, ಬಾಳಗಿಮನೆ ಶಾಲೆ ಬಳಿ ಮುಂದೆ ಹೋಗುತ್ತಿದ್ದ ವಾಹನವನ್ನು ಹಿಂದಿಕ್ಕಿದ್ದಾನೆ. ನಂತರ ತನ್ನ ಟ್ಯಾಂಕರ್ ವೇಗ ಕಡಿಮೆ ಮಾಡದೇ, ಎದುರಿನಿಂದ ಬರುತ್ತಿದ್ದ ಕುಮಟಾದ ಮಹೇಶ ಮಡಿವಾಳ ಅವರ ಕಾರಿಗೆ ಗುದ್ದಿದ್ದಾನೆ. ಇದಾದ ನಂತರ ಸಹ ಅದೇ ವೇಗದಲ್ಲಿ ಮುನ್ನುಗ್ಗಿ ಹುಬ್ಬಳ್ಳಿ ಕಡೆ ಮುಖ ಮಾಡಿ ನಿಂತಿದ್ದ ಬೈಕಿನ ಮೇಲೆ ಟ್ಯಾಂಕರ್ ಹತ್ತಿಸಿದ್ದಾನೆ. ಈ ವೇಳೆ ಯಾವುದೇ ಜೀವಾಪಾಯ ಆಗದಿದ್ದರೂ, ಅಪಘಾತಕ್ಕೆ ಒಳಗಾದ ಕಾರು ಹಾಗೂ ಬೈಕಿಗೆ ಹಾನಿಯಾಗಿದೆ.