ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಕರಾವಳಿ ಭಾಗದ ಶಾಲೆಗಳಿಗೆ ಸೋಮವಾರವೂ ಜಿಲ್ಲಾಡಳಿತ ರಜೆ ಘೋಷಿಸಿದೆ.
ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ ಹಾಗೂ ಕಾರವಾರ ತಾಲೂಕಿಗೆ ಸೀಮಿತವಾಗಿ ಮಳೆ ರಜೆ ನೀಡಲಾಗಿದೆ. ಮಲೆನಾಡು ಭಾಗಕ್ಕೆ ಈ ರಜೆ ಅನ್ವಯವಾಗುವುದಿಲ್ಲ. ಕರಾವಳಿ ಭಾಗದಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿರುವುದನ್ನು ಮನಗಂಡು ಶಿಕ್ಷಣಾಧಿಕಾರಿ ಹಾಗೂ ತಹಶೀಲ್ದಾರರ ವರದಿ ಪಡೆದು ಜಿಲ್ಲಾಧಿಕಾರಿ ಈ ರಜೆ ಘೋಷಣೆ ಮಾಡಿದ್ದಾರೆ.