
ಶಿರಸಿ: `ಉಚಿತ ಶಿಬಿರ\’ಗಳಲ್ಲಿ ನೀವು ಭಾಗವಹಿಸಿದ್ದೀರಾ? ಹಾಗಾದರೇ, ದಾಖಲೆಗಳ ಪ್ರಕಾರ ನೀವು ವೇಶ್ಯೆ ಆಗಿರಬಹುದು. ಎಚ್ಚರ!
ಮಹಿಳಾ ಕ್ರಾಂತಿ ಎಂಬ ಸಂಘಟನೆಯವರು ಉಚಿತ ಶಿಬಿರಗಳಗಳಲ್ಲಿ ಭಾಗವಹಿಸಿದ ಮಹಿಳೆಯರ ವಿವರ ಪಡೆದು ಅವರನ್ನು ಸೆಕ್ಸ್ ವರ್ಕರ್ ಎಂದು ಬಿಂಬಿಸಿ ತಾವು ಹಣ ಮಾಡಿಕೊಳ್ಳುತ್ತಿದ್ದಾರೆ. ವೇಶ್ಯೆಯರನ್ನು ಮುಖ್ಯಹಾದಿಗೆ ತರುವುದಕ್ಕಾಗಿ ಸಿಗುವ ಅನುದಾನವನ್ನು ಕೊಳ್ಳೆಹೊಡೆಯಲು ಈ ಸಂಸ್ಥೆಯವರು ಅಮಾಯಕ ಹೆಣ್ಣು ಮಕ್ಕಳ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಆ ಸಂಸ್ಥೆಯಲ್ಲಿ ಕೆಲಸ ಮಾಡಿದ ಸಿಬ್ಬಂದಿಯೇ ಇದೀಗ ಈ ಮಾಹಿತಿ ಬಿಚ್ಚಿಟ್ಟಿದ್ದಾರೆ. ಯಲ್ಲಾಪುರ, ಕುಮಟಾ, ಹೊನ್ನಾವರ ಹಾಗೂ ಶಿರಸಿ ತಾಲೂಕಿನ ಅನೇಕ ಮಹಿಳೆಯರು ನೈಜ ಜೀವನದಲ್ಲಿ ಸಭ್ಯರೇ ಆಗಿದ್ದರೂ, ದಾಖಲೆಗಳ ಪ್ರಕಾರ ವೇಶ್ಯೆಯಾಗಿ ಬದಲಾಗಿದ್ದಾರೆ.