ಶ್ರೀಕ್ಷೇತ್ರ ಗೋಕರ್ಣ ಹವ್ಯಕ ಕ್ಷೇಮಾಭಿವೃದ್ದಿ ಸಂಘದವತಿಯಿAದ ಆಡುಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪಾಠೋಪಕರಣ ವಿತರಣಾ ಕಾರ್ಯಕ್ರಮ ಸೋಮವಾರ ನಡೆಯಿತು.
ಸಂಘದ ಅಧ್ಯಕ್ಷ ರಮೇಶ ಪ್ರಸಾದ, ಉಪಾಧ್ಯಕ್ಷ ರವೀಂದ್ರ ಕೊಡ್ಲೆಕೆರೆ ಮಾತನಾಡಿ ವಿದ್ಯಾರ್ಥಿಗಳಿಗೆ ಕೊಡುಗೆ ನೀಡಿ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸುವ ಉದ್ದೇಶ ನಮ್ಮದಾಗಿದ್ದು, ಒಳ್ಳೆಯ ವಿದ್ಯಾಭ್ಯಾಸದೊಂದಿಗೆ ಸಾಧನೆ ಮಾಡಿ ಮನೆ, ಶಾಲೆ ಹಾಗೂ ಊರಿಗೆ ಕೀರ್ತಿ ತರಬೇಕು ಎಂದು ಮಕ್ಕಳಿಗೆ ಕರೆ ನೀಡಿದರು.
ಮುಖ್ಯಾಧ್ಯಾಪಕರಾದ ಪಿ.ಎಮ್. ಮುಕ್ರಿ ಮಾತನಾಡಿ ಪ್ರತಿ ವರ್ಷ ಈ ಸಂಸ್ಥೆ ವಿದ್ಯಾರ್ಥಿಗಳಿಗೆ ಪಾಠೋಪಕರಣ ನೀಡುತ್ತಾ ಬಂದಿರುವುದಕ್ಕೆ ಅಭಿನಂದಿಸಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. ಒಂದರಿAದ ಏಳನೇ ತರಗತಿವರೆಗಿನ ಒಟ್ಟು 228 ವಿದ್ಯಾರ್ಥಿಗಳಿಗೆ ನೋಟ್ ಬುಕ್, ಪೆನ್, ಸ್ಕೆಲ್ ಹಾಗೂ ಬಿಸ್ಕತ್ ಹಾಗೂ ಆರು ಮತ್ತು ಏಳನೆ ತರಗತಿ ಮಕ್ಕಳಿಗೆ ಇದರ ಜೊತೆ ಕಂಪಾಸ್ ಸಹ ವಿತರಿಸಲಾಯಿತು. ಒಟ್ಟು 50 ಸಾವಿರ ರೂಪಾಯಿಗು ಹೆಚ್ಚು ಮೌಲ್ಯದ್ದಾಗಿದೆ.
ಈ ವೇಳೆ ಸಂಘದ ಗೌರವಾಧ್ಯಕ್ಷ ವಸಂತರಾಜನ್ ಕೊಡ್ಲೆಕೆರೆ,ಸದಸ್ಯರಾದ ಲಂಬೋಧರ ಸಭಾಹಿತ,ರಾಮಚಂದ್ರ ಮಾಸ್ಕೇರಿ,ಲಕ್ಷಿö್ಮÃನಾರಾಯಣ ಜಂಭೆ,ಮೋಹನ ಉಗ್ರು, ಶಂಕರ ಜೋಶಿ, ದತ್ತಾತ್ರೇಯ ಗಾಯತ್ರಿ, ಕಿರಣ ಹೊಸ್ಮನೆ, ಎಸ್.ಡಿ. ಎಮ್.ಸಿ. ಅಧ್ಯಕ್ಷ ಪ್ರಶಾಂತ ನಾಯ್ಕ, ಶಾಲಾ ಶಿಕ್ಷಕವೃಂದದವರು ಮತ್ತಿತರರು ಉಪಸ್ಥಿತರಿದ್ದರು.
ನಿವೃತ್ತ ಪ್ರಾಚಾರ್ಯ ಕೆ.ಜಿ. ಗುಣಿಯವರು ಈ ಸಂಘ ರಚಿಸಿಕೊಂಡು ತಮ್ಮ ಸಮಾಜದ ಜೊತೆ ಇತರೆ ಸಾಮಾಜಿಕ ಕಾರ್ಯಕ್ರಮವನ್ನ ಮಾಡುತ್ತಾ ಬಂದಿದ್ದು, ಇಳಿವಯಸ್ಸಿನಲ್ಲೂ ಸಮಾಜಮುಖಿ ಕಾರ್ಯಕ್ಕೆ ಉಳಿದವರಿಗೆ ಪ್ರೇರಣೆ ನೀಡುತ್ತಿರುವುದು ವಿಶೇಷವಾಗಿದೆ.
Discussion about this post