ಕಾರವಾರ: ಕಲ್ಪನಾ ರಶ್ಮಿ ಕಲಾಲೋಕದಲ್ಲಿ ಗುರುಪೂರ್ಣಿಮೆ ಅಂಗವಾಗಿ ನಡೆದ ಸಂಗೀತ ಕಾರ್ಯಕ್ರಮ ನೆರೆದವರ ಮನಸೂರೆಗೊಂಡಿತು. ಗಾಯಕಿ ಸೀಮಾ ಬಸವರಾಜ ವಿವಿಧ ಹಾಡುಗಳನ್ನು ಪ್ರಸ್ತುತಪಡಿಸಿದ್ದು, ಕೃಷ್ಣಾನಂದ ಗುರವ್ ಕೀಬೋರ್ಡ ನುಡಿಸಿದರು. ನೆರೆದಿದ್ದ ವಿದ್ಯಾರ್ಥಿಗಳು ಇದಕ್ಕೆ ಧ್ವನಿಯಾದರು.
ಸಂಗೀತ ಕಾರ್ಯಕ್ರಮದ ಮೂಲಕ ಈ ವರ್ಷದ ವಿವಿಧ ತರಬೇತಿಗಳನ್ನು ಇಲ್ಲಿ ಶುರು ಮಾಡಲಾಯಿತು. ಭರತನಾಟ್ಯ, ಚಲನಚಿತ್ರ ನೃತ್ಯ, ಜಾನಪದ ನೃತ್ಯ, ದೇಶಭಕ್ತಿ ಗೀತೆ ನೃತ್ಯ, ಆಧುನಿಕ ನೃತ್ಯ, ಶಾಸ್ತ್ರೀಯ ಸಂಗೀತ, ಹಿನ್ನೆಲೆ ಗಾಯನ, ಕೊಳಲುವಾದನ, ಗಿಟಾರ, ತಬಲಾ ವಾದನ, ಚಿತ್ರಕಲೆ, ಕರಾಟೆ, ಜುಂಬಾ, ಏರೋಬಿಕ್ಸ್, ಯೋಗಗಳ ಕುರಿತು ಇಲ್ಲಿ ತರಬೇತಿ ನೀಡಲಾಗುತ್ತಿದೆ.

ಈ ತರಗತಿಗಳ ಉದ್ಘಾಟನೆ ಹಿನ್ನಲೆ ಪೂಜಾ ಕಾರ್ಯಕ್ರಮ ನಡೆಯಿತು. ಪ್ರಮುಖರಾದ ಬಿ ಎನ್ ಸರ್ಯಪ್ರಕಾಶ, ಉದಯ ಬಶೆಟ್ಟಿ, ಅಶೋಕ ನಾಯ್ಕ, ರತಿಸ ಆಚಾರಿ, ಶೃದ್ಧಾ ನಾಯಕ, ಯಮೂನಾ ಶೇಟ್ ಅಪೇಕ್ಷಾ ಶಿರೋಡಕರ್, ಶ್ರದ್ಧಾ ಕಾಂಬಳೆ, ಸರ್ವಶ್ರೀ ಪರಾಷ್ಟೇಕರ, ಹರ್ಷಿತಾ ಭೋವಿ, ಶ್ರದ್ದಾ ಬಾಂದೆಕರ ಪೂಜೆಯಲ್ಲಿ ಭಾಗವಹಿಸಿದ್ದರು.