ಹೊನ್ನಾವರ: ಹಳದಿಪುರದ ಬಗ್ರಾಣಿಯಲ್ಲಿ ಬುಧವಾರ ಮನೆ ಮೇಲೆ ಮರ ಬಿದ್ದಿದೆ.
ಮನೆಯಲ್ಲಿ ವಾಸವಾಗಿದ್ದ ಕೃಷ್ಣ ಗೌಡ, ಮಾದೇವಿ ಗೌಡ ಹಾಗೂ ನಿಫುಲ ಗೌಡ ಗಾಯಗೊಂಡಿದ್ದಾರೆ. ಈ ಮನೆಯಲ್ಲಿ ನಾಲ್ಕು ಜನ ವಾಸಿಸುತ್ತಿದ್ದು, ಮರ ಬೀಳುವಾಗ ಒಬ್ಬರು ಹೊರಗಿದ್ದರು. ಗಾಯಗೊಂಡ ಮೂವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.