ಶಿರಸಿ: `ಕೆಲಸಗಾರರನ್ನು ಕರೆತರುವುದಕ್ಕಾಗಿ ಟಿಎಸ್ಎಸ್ ವಾಹನ ಖರೀದಿ ಮಾಡಿದ್ದು, ವಾಹನಕ್ಕೆ ಇಂಧನ ನೀಡುವ ದರ ಹೆಚ್ಚಿಸಿದ್ದರಿಂದ ಯಾರಿಗೂ ಹಾನಿ ಆಗಿಲ್ಲ. ಅದಾಗಿಯೂ ನಮ್ಮ ಅವಧಿಯಲ್ಲಿ ಕೆಲಸಗಾರರನ್ನು ಸಂಸ್ಥೆಗೆ ಕರೆತರುವ ಸಲುವಾಗಿ ವಾಹನದ ಇಂಧನಕ್ಕೆ ನೀಡುವ ದರ ಹೆಚ್ಚಿಸಿ ಸಂಸ್ಥೆಗೆ ಹಾನಿ ಮಾಡಿದ್ದೇವೆ ಎಂದು ಈಗಿನ ಆಡಳಿತ ಮಂಡಳಿ ಪ್ರಕರಣ ದಾಖಲಿಸಿದೆ\’ ಎಂದು ಟಿಎಸ್ಎಸ್ ಮಾಜಿ ಕಾರ್ಯಾಧ್ಯಕ್ಷ ರಾಮಕೃಷ್ಣ ಹೆಗಡೆ ಮತ್ತು ಮಾಜಿ ವ್ಯವಸ್ಥಾಪಕ ರವೀಶ ಹೆಗಡೆ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು `ಅಂದು ಆಡಳಿತ ಮಂಡಳಿಯ ಒಪ್ಪಿಗೆ ಪಡೆದೇ ಹಣ ನೀಡಲಾಗಿದ್ದರೂ ಈಗ ದ್ವೇಷದ ಕಾರಣದಿಂದ ದೂರು ನೀಡಿದ್ದಾರೆ\’ ಎಂದು ಆರೋಪಿಸಿದರು.
`ಈಗಿನ ಆಡಳಿತ ಮಂಡಳಿಯ ಯಾವುದೇ ಸಭೆಯ ನಡಾವಳಿ ಕೇಳಿದರೂ ಲಿಖಿತ ರೂಪದಲ್ಲಿ ನೀಡಲು ನಿರಾಕರಿಸುತ್ತಿದೆ\’ ಎಂದು ದೂರಿದರು.
`ಸಂಸ್ಥೆಗೆ ಕೆಲಸಗಾರರನ್ನು ಕರೆತರುವ ವಾಹನಗಳ ಹೊರಗುತ್ತಿಗೆ ಶಾಂತಾರಾಮ ಹೆಗಡೆ ಅವರು ಅಧ್ಯಕ್ಷರಾಗಿದ್ದ ವೇಳೆ 2011ರಲ್ಲಿಯೇ ಪ್ರಾರಂಭಗೊAಡಿದೆ. ನಂತರ ಹಂತ ಹಂತವಾಗಿ ಸಂಘದಿoದ ವಾಹನ ಖರೀದಿ ಮತ್ತು ಬದಲಾಯಿಸುವ ನಿಧಿಯನ್ನು ಪ್ರಾರಂಭಿಸಿ ಈ ವಾಹನಗಳನ್ನು ಸಂಘದ ಸುಪರ್ದಿಗೆ 2022ರಲ್ಲಿ ಪಡೆಯಲಾಗಿತ್ತು. ತೈಲ ಬೆಲೆ ಏರಿಕೆ ಹಿನ್ನೆಲೆಯಲ್ಲಿ 5 ಟೆಂಪೋಗಳಿಗೆ ಪ್ರತಿ ತಿಂಗಳು 8 ಸಾವಿರ ರೂ ಹೆಚ್ಚುವರಿಯಾಗಿ ನೀಡಲಾಗಿದೆ. ಆದರೆ, ಈಗಿನ ಆಡಳಿತ ಮಂಡಳಿ ಕೇವಲ ನಮ್ಮಿಬ್ಬರ ಮೇಲೆ ಅನಗತ್ಯ ದೂರು ದಾಖಲಿಸುತ್ತಿದೆ\’ ಎಂದು ಆಕ್ರೋಶ ವ್ಯಕ್ತಪಡಿಸಿದರು.