ಕಾರವಾರ: ಮುದುಗಾದಲ್ಲಿ ವಾಸವಾಗಿದ್ದ ವೆಸ್ಟ್ ಬಂಗಾಲದ ಅರುಣ (35) ಎಂಬಾತ ನಾಪತ್ತೆಯಾಗಿದ್ದು, ಆತನ ಕುಟುಂಬದವರು ಹುಡುಕಾಡುತ್ತಿದ್ದಾರೆ.
ಮುದುಗಾದ ಎನ್ಸಿಸಿ ಲೇಬರ್ ಕಾಲೋನಿಯಲ್ಲಿದ್ದ ಈತ ಜು 7ರಂದು ಕಣ್ಮರೆಯಾಗಿದ್ದಾನೆ. ಅಂದು ಮಧ್ಯಾಹ್ನ 2ಗಂಟೆಯವರೆಗೆ ಮನೆಯಲ್ಲಿಯೇ ಇದ್ದ. ನಂತರ ಯಾರಿಗೂ ಕಾಣಿಸಿಕೊಂಡಿಲ್ಲ. ಅವರ ಊರಿನಲ್ಲಿ ವಿಚಾರಿಸಿದರೂ ಆತನ ಸುಳಿವು ಸಿಕ್ಕಿಲ್ಲ.
ಈತನನ್ನು ಕಂಡರೆ 08382-222443 ಅಥವಾ 9480805262ಗೆ ತಿಳಿಸುವಂತೆ ಪೊಲೀಸರು ಕೇಳಿಕೊಂಡಿದ್ದಾರೆ.