ಈ ಮೊದಲು ಶಿರೂರು-ಉಳುವರೆಯಲ್ಲಿ ಯಾರೇ ಸಾವನಪ್ಪಿದರೂ ಮನೆ ಹಿಂದಿನ ಅರಣ್ಯ ಪ್ರದೇಶದಲ್ಲಿ ಶವ ಸಂಸ್ಕಾರ ಮಾಡುತ್ತಿದ್ದರು. ಆದರೆ, ಇದೀಗ ಅಲ್ಲಿ ಶವ ಸಂಸ್ಕಾರಕ್ಕೆ ಸರಿಯಾದ ಅರಣ್ಯವೇ ಇಲ್ಲ!
ಗುಡ್ಡ ಕುಸಿತದಲ್ಲಿ ಕೊಚ್ಚಿ ಹೋಗಿದ್ದ ಉಳುವರೆ ಗ್ರಾಮದ ಸಣ್ಣಿ ಹನುಮ ಗೌಡ ಒಂದುವಾರ ಕಳೆದರೂ ಪತ್ತೆಯಾಗಿರಲಿಲ್ಲ. ಮಂಗಳವಾರ ಆಕೆಯ ಶವ ದೊರೆತಿದ್ದು, ಉಟ್ಟ ಸೀರೆಯಿಂದ ಅದು ಸಣ್ಣಿಯ ಶವ ಎಂದು ಗೊತ್ತಾಯಿತು. ಅಂಕೋಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ ಶವವನ್ನು ಪಡೆದ ಸಂಬoಧಿಕರಿಗೆ ಶವ ಸಂಸ್ಕಾರ ಮಾಡುವುದು ಎಲ್ಲಿ? ಎಂಬ ಪ್ರಶ್ನೆ ಕಾಡಿತು. ಕೊನೆಗೆ ಶವವನ್ನು ಉಳುವರೆಗೆ ತಂದು ಮನೆಯಿದ್ದ ಸ್ಥಳದಲ್ಲಿಯೇ ಸಂಸ್ಕಾರ ನಡೆಸಿದರು.