ಕಾರವಾರ: ಮೂಡಗೇರಿಯ ಪ್ರಕಾಶ ಗೋವಿಂದ ನಾಯ್ಕ (64) ಔಷಧಿ ಎಂದು ತಿಳಿದು ವಿಷ ಕುಡಿದು ಸಾವನಪ್ಪಿದ್ದಾರೆ.
ಸೀಬರ್ಡ ಕಾಲೋನಿಯ ಈತ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಈಚೆಗೆ ಬಿಬಿ ಮತ್ತು ಶುಗರ್ ಕಾಣಿಸಿಕೊಂಡಿತ್ತು. ಈ ಹಿನ್ನಲೆ ವೈದ್ಯರ ಸಲಹೆ ಪಡೆದು ಔಷಧಿ ತೆಗೆದುಕೊಳ್ಳುತ್ತಿದ್ದರು. ಜುಲೈ 18ರಂದು ಕಣ್ತಪ್ಪಿನಿಂದ ಔಷಧಿ ಎಂದು ತಿಳಿದು ಮನೆಯಲ್ಲಿದ್ದ ವಿಷ ಕುಡಿದಿದ್ದು, ಅಸ್ವಸ್ಥಗೊಂಡ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ತೀವೃ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಿಲ್ಲ.
ಜುಲೈ 24ರ ನಸುಕಿನಲ್ಲಿ ಅವರು ನಿಧನರಾದರು. ಪ್ರಕಾಶ ಗೋವಿಂದ ನಾಯ್ಕ ಚಂಡಿಯಾದಲ್ಲಿ ವಾಸವಿರುವ ನಿವೃತ್ತ ಸೈನಿಕ ದೇವಿದಾಸ ಗೋವಿಂದ ನಾಯ್ಕ (70) ಅವರ ಸಹೋದರರಾಗಿದ್ದರು.