ನೀವು ಉತ್ತಮ ಕೃಷಿಕರಾ? ಅಥವಾ ಕೃಷಿ ಸಾಧಕರಾ? ನಿಮ್ಮನ್ನೂ ಯಾರೂ ಗುರುತಿಸಲಿಲ್ಲವಾ.. ಹಾಗಾದರೆ `ಕೃಷಿ ಪ್ರಶಸ್ತಿ\’ ಪಡೆಯಲು ಇಲ್ಲಿ ಅರ್ಜಿ ಹಾಕಿ!
`ಕೃಷಿ ಪಂಡಿತ\’ ಮತ್ತು `ಕೃಷಿ ಪ್ರಶಸ್ತಿ\’ಗೆ ಕೃಷಿ ಇಲಾಖೆ ಅರ್ಜಿ ಕರೆದಿದೆ. ಕೃಷಿಯಲ್ಲಿ ಅಳವಡಿಸಿಕೊಂಡಿರುವ ಬೆಳೆ ಪದ್ಧತಿ, ಸಮಗ್ರ ಕೃಷಿ ಪದ್ಧತಿ, ಸೂಕ್ಷ್ಮ ನೀರಾವರಿ ಅಳವಡಿಕೆ, ಬಿತ್ತನೆ ಬೀಜ ಬಳಕೆ, ಮಣ್ಣು ನೀರು ಸಂರಕ್ಷಣೆ, ಸಾವಯವ ಕೃಷಿ, ನೈಸರ್ಗಿಕ ಕೃಷಿ ಸಮಗ್ರ ಪೋಷÀಕಾಂಶ ನಿರ್ವಹಣೆ, ಸಮಗ್ರ ಪೀಡೆ ನಿರ್ವಹಣೆ, ಮಳೆ ನೀರು ಕೋಯ್ದು, ಕೃಷಿ ಯಾಂತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ರೈತರು ಕೃಷಿ ಪಂಡಿತ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಆಗಸ್ಟ್ 14 ಕೊನೆದಿನ.
ಭತ್ತದ ಬೆಳೆಯಲ್ಲಿ ಸಾಧನೆ ಮಾಡಿದವರು ಕೃಷಿ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು. ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆದಿನ.
ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಸಂಪರ್ಕಿಸಿ.