ಭಾರತದಲ್ಲಿ ಅರಣ್ಯ ಹಕ್ಕುಗಳನ್ನು ನಿರ್ವಹಿಸುವ ವಿಧಾನದಲ್ಲಿ ಬದಲಾವಣೆ ಸೂಚಿಸಿ ಕೇಂದ್ರ ಸರ್ಕಾರ ದಾಜ್ಗುವಾ ಯೋಜನೆ ಜಾರಿಗೆ ತಂದಿದೆ. ಪರಿಶಿಷ್ಠ ಪಂಗಡ ಮತ್ತು ಅರಣ್ಯವಾಸಿಗಳ ಹಕ್ಕುಗಳನ್ನ ಗುರುತಿಸಲು ಈ ಯೋಜನೆ ನೆರವಾಗಲಿದೆ.
ಈ ಬಗ್ಗೆ ನ್ಯಾಯವಾದಿ ರವೀಂದ್ರ ನಾಯ್ಕ ಅವರು ಮಾಹಿತಿ ನೀಡಿದ್ದು, ಕೆಂದ್ರ ಸರ್ಕಾರದ ಬುಡಕಟ್ಟು ಮಂತ್ರಾಲಯದ ಅರಣ್ಯ ಹಕ್ಕು ಕಾಯಿದೆ ಅನುಷ್ಠಾನ ಮತ್ತು ಹೊಸ ಉಪಕ್ರಮದ ಪ್ರತಿಯನ್ನು ಅವರು ಪ್ರದರ್ಶಿಸಿದರು. `ಕೇಂದ್ರ ಸರ್ಕಾರದ ಹೊಸ ನೀತಿಯಂತೆ ಅರಣ್ಯ ಭೂಮಿ ಹಕ್ಕುಗಳನ್ನು ಪ್ರಕ್ರಿಯೆಗೊಳಿಸಲು ರಾಜ್ಯ ಸರ್ಕಾರಕ್ಕೆ ಹೆಚ್ಚನ ಅನುಷ್ಠಾನದ ಜವಾಬ್ದಾರಿ ನೀಡಿದೆ. ವಿವಿಧ ಅರಣ್ಯ ಹಕ್ಕು ಸಮಿತಿಗಳಿಗೆ ದಾಖಲೆಗಳನ್ನು ಸಿದ್ದ ಪಡಿಸುವ ಹಾಗೂ ಪುರಾವೆಗಳನ್ನ ಸಂಗ್ರಹಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ಜೊತೆಗೆ ದಾಖಲೆಗಳನ್ನು ಡಿಜಿಟಲ್ಕರಣಗೊಳಿಸುವ ಕಾರ್ಯದೊಂದಿಗೆ ವಿವಿಧ ಅರಣ್ಯ ಹಕ್ಕು ಸಮಿತಿಗಳಿಗೆ ಬೆಂಬಲಿಸುವ ಕಾರ್ಯವೂ ನಡೆಯಬೇಕಿದೆ. ಬಾಕಿ ಇರುವ ಹಕ್ಕುಗಳ ಪ್ರಕ್ರಿಯೆ ತ್ವರಿತಗೊಳಿಸುವ ಉದ್ದೇಶ ಈ ಸೂಚನೆಯಲ್ಲಿದೆ’ ಎಂದವರು ವಿವರಿಸಿದರು.
ಮಾರ್ಚ 2025 ರ ಅವಧಿಗೆ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 51.11 ಲಕ್ಷ ಅರಣ್ಯ ಹಕ್ಕು ಅರ್ಜಿಗಳಲ್ಲಿ ಸರಿ ಸುಮಾರು ಶೇ 14.4 ಬಾಕಿ ಉಳಿದಿದೆ. ವಿಲೇವಾರಿ ಮಾಡಲಾದ ಹಕ್ಕುಗಳಲ್ಲಿ ಶೇ 42ಕ್ಕಿಂತ ಹೆಚ್ಚು ತಿರಸ್ಕಾರವಾಗಿರುವ ಹಿನ್ನಲೆಯಲ್ಲಿ ಅನುಷ್ಠಾನದಲ್ಲಿ ಪರಿಪೂರ್ಣತೆ ನೀಡುವ ಉದ್ದೇಶದಿಂದ ದಾಜ್ಗುವಾ ಯೋಜನೆಯು 17 ಸಚಿವಾಲಯಗಳ ಸಹಯೋಗಪಡೆಯಲಿದೆ’ ಎಂದವರು ಹೇಳಿದರು. ಈ ಅಭಿಯಾನವು ದೇಶಾದ್ಯಂತ 63,843 ಹಳ್ಳಿಗಳು, 549 ಜಿಲ್ಲೆಗಳು, ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 5 ಕೋಟಿಗೂ ಹೆಚ್ಚು ಅರಣ್ಯವಾಸಿಗಳಿಗೆ ನೇರವು ನೀಡುವು ಗುರಿ ಹೋಂದಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ರಾಘವೇಂದ್ರ ನಾಯ್ಕ ಕವಂಚೂರು, ಅಬ್ದುಲ್ ಸುಬಾನ್ ಸಾಬ್ ಅರೆಂದೂರು, ಕಮಲಾಕರ್ ಗೌಡ ತ್ಯಾರ್ಸಿ, ದಯಾನಂದ ಕೆ ಗೌಡ ಬಾಮಣಿ, ಆನಂದ ಕೆ ಗೌಡ, ಮಾಬ್ಲೇಶ್ವರ ದ್ಯಾವ ಗೌಡ ರಾಗಿಹೊಸಳ್ಳಿ ಉಪಸ್ಥಿತರಿದ್ದರು.
Discussion about this post