ಹೊನ್ನಾವರ: ಕರ್ಕಿಕೊಡಿಯ ಮೀನುಗಾರ ನಾಗರಾಜ ಉಪ್ಪಾರ ಅವರ 2 ವರ್ಷದ ಮಗು ಬಾವಿಗೆ ಬಿದ್ದು ಸಾವನಪ್ಪಿದೆ. ಸಾವನಪ್ಪಿದ ಮಗುವಿನ ಹೆಸರು ಆಕಾಶ ಉಪ್ಪಾರ್.
ಜುಲೈ 25ರ ಬೆಳಗ್ಗೆ ಮನೆ ಅಂಗಳದಲ್ಲಿ ಆಡುತ್ತಿದ್ದ ಮಗು ಬೆಳಗ್ಗೆ 8.30ರ ವೇಳೆಗೆ ಪಕ್ಕದ ಜೇಮ್ಸ ಫರ್ನಾಂಡಿಸ್ ಮನೆ ಅಂಗಳಕ್ಕೆ ತೆರಳಿದೆ. ಅಲ್ಲಿ ನೆಲಕ್ಕೆ ಸಮನಾಂತರವಾಗಿದ್ದ ಬಾವಿಯಲ್ಲಿ ಕಾಲು ಜಾರಿ ಬಿದ್ದಿದ್ದು, ಇದನ್ನು ನೋಡಿದ ಜನ ರಕ್ಷಿಸಿದ್ದಾರೆ. ಅಷ್ಟರೊಳಗೆ ಮಗು ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿದು ಅಸ್ವಸ್ಥಗೊಂಡಿತ್ತು. ಆ ಕೇರಿಯವರೆಲ್ಲ ಸೇರಿ ಮಗುವನ್ನು ಆಸ್ಪತ್ರೆಗೆ ಸಾಗಿಸಿದರು ಪ್ರಯೋಜನವಾಗಿಲ್ಲ. 10.5ರ ವೇಳೆಗೆ ವೈದ್ಯರು ಮಗು ಸಾವನಪ್ಪಿರುವುದನ್ನು ಖಚಿತಪಡಿಸಿದರು.