ಕುಮಟಾ: ಹಳಕಾರ ಅರಣ್ಯ ಪ್ರದೇಶದಲ್ಲಿ ದೂಪದ ಮರ ಬಿದ್ದ ಪರಿಣಾಮ ಕುಮಟಾ ಪಟ್ಟಣ, ಚಿತ್ರಗಿ ಹಾಗೂ ಧಾರೇಶ್ವರ ಭಾಗದಲ್ಲಿ ವಿದ್ಯುತ್ ಪೂರೈಕೆಗೆ ತೊಂದರೆಯಾಗಿದೆ.
ಇಲ್ಲಿನ 11 ಕೆವಿ ವಿದ್ಯುತ್ ತಂತಿ ಮೇಲೆ ಗುರುವಾರ ಬೆಳಗ್ಗೆ ದೊಡ್ಡ ಮರ ಬಿದ್ದಿದ್ದು, ಹೆಸ್ಕಾಂ ಸಿಬ್ಬಂದಿ ಮರ ತೆರವಿಗಾಗಿ ಇಡೀ ದಿನ ಸಮಯ ತೆಗೆದುಕೊಂಡರು. ಹೆಸ್ಕಾಂ ಸಹಾಯಕ ಅಭಿಯಂತರ ರಾಜೇಶ ಮಡಿವಾಳ ಸ್ಥಳದಲ್ಲಿ ನಿಂತು ಮರ ಕಟಾವು ಮಾಡಿಸಿದರು. ಸಂಜೆ 7.30ರ ವೇಳೆಗೆ ವಿದ್ಯುತ್ ವಿದ್ಯುತ್ ಪೂರೈಸಿದರು.