ಯಲ್ಲಾಪುರ: `3 ತಿಂಗಳ ಅವಧಿಗೆ ಮೊಬೈಲ್ ರಿಚಾರ್ಜ ಮಾಡಿಸಿದ್ದು, ರಿಚಾರ್ಜ ಮಾಡಿದ ನಂತರ ಜಿಯೋ ನೆಟ್ವರ್ಕ ಸರಿಯಾಗಿ ಸಿಗುತ್ತಿಲ್ಲ\’ ಎಂದು ಆರೋಪಿಸಿರುವ ಪಟ್ಟಣ ಪಂಚಾಯತ ಸದಸ್ಯ ಸೋಮೇಶ್ವರ ನಾಯ್ಕ ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟಿದ್ದಾರೆ.
`ರವೀಂದ್ರ ನಗರದಲ್ಲಿ ಜಿಯೋ ಟವರ್ ಇದ್ದು, ಅಲ್ಲಿಂದ 200ಮೀ ದೂರದಲ್ಲಿ ನೆಟ್ವರ್ಕ ಸರಿಯಿಲ್ಲ. ಈ ಬಗ್ಗೆ 4 ಬಾರಿ ಕಚೇರಿಗೆ ಮಾಹಿತಿ ನೀಡಿದರೂ ಸರಿಪಡಿಸಿಲ್ಲ. ಸ್ಥಳೀಯವಾಗಿ ನಿರ್ವಹಣೆ ಹೊಣೆ ಹೊತ್ತವರು ವಿದ್ಯುತ್ ಇಲ್ಲದಿರುವಾಗ ಜನರೇಟರ್\’ನ್ನು ಬಳಸದೇ ಕಂಜೂಸ್ ಬುದ್ದಿ ಪ್ರದರ್ಶಿಸುತ್ತಿದ್ದಾರೆ\’ ಎಂದು ದೂರಿದರು.
`ಜಡ್ಡಿ, ಕಾಳಮ್ಮನಗರ ಪ್ರದೇಶದಲ್ಲಿ ಸಹ ಇದೇ ಸಮಸ್ಯೆಯಿದೆ. ಅಲ್ಲಿನ ಜನರೂ ಈ ಬಗ್ಗೆ ದೂರಿದ್ದಾರೆ. 3 ತಿಂಗಳ ಅವಧಿಗೆ 900ರೂ ಹಣ ಪಡೆಯುವ ಜಿಯೋ ಸರಿಯಾದ ಸೇವೆ ನೀಡುತ್ತಿಲ್ಲ\’ ಎಂದು ಆರೋಪಿಸಿದರು. ದೂರು ಸ್ವೀಕರಿಸಿದ ಪೊಲೀಸರು ಗ್ರಾಹಕರ ಸೇವೆಯಲ್ಲಿ ನ್ಯೂನ್ಯತೆ ಒದಗಿಸದಂತೆ ಜಿಯೋ ಕಂಪನಿ ಪ್ರತಿನಿಧಿಗೆ ಬುದ್ದಿಮಾತು ಹೇಳುವುದಾಗಿ ಭರವಸೆ ನೀಡಿದರು.