ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಕಾರಣ ಜುಲೈ 26ರ ಶುಕ್ರವಾರ ವಿವಿಧ ತಾಲೂಕಿನ ಶಾಲಾ-ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ.
ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಹಳಿಯಾಳ, ಭಟ್ಕಳ, ದಾಂಡೇಲಿ, ಜೊಯಿಡಾ ಹಾಗೂ ಯಲ್ಲಾಪುರದ ಶಾಲೆಗಳಿಗೆ ಮಾತ್ರ ಈ ರಜೆ ಸಿಗಲಿದೆ. ಶಿಕ್ಷಣಾಧಿಕಾರಿಗಳ ವರದಿ ಪಡೆದು ಮಳೆ ವ್ಯಾಪಕ ಪ್ರಮಾಣದಲ್ಲಿರುವ ತಾಲೂಕುಗಳಲ್ಲಿ ಮಕ್ಕಳಿಗೆ ಶಾಲೆಗೆ ಬರಲು ಸಮಸ್ಯೆ ಆಗುವುದನ್ನು ಅರಿತು ಜಿಲ್ಲಾಡಳಿತ ಈ ರಜೆ ಘೋಷಿಸಿದೆ. ಅಂಗನವಾಡಿ, ಪ್ರಾಥಮಿಕ, ಪ್ರೌಢ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ರಜೆ ನೀಡಲಾಗಿದೆ. ಐಟಿಐ ಹಾಗೂ ಡಿಪ್ಲೋಮಾ ಕಾಲೇಜುಗಳಿಗೂ ರಜೆ ಅನ್ವಯ.
ಶಿರಸಿ, ಸಿದ್ದಾಪುರ ಹಾಗೂ ಮುಂಡಗೋಡು ತಾಲೂಕಿನ ಶಾಲೆಗಳಿಗೆ ರಜೆ ಭಾಗ್ಯವಿಲ್ಲ.