ಶಿರಸಿಯಿoದ 32 ಕಿಮೀ ದೂರದಲ್ಲಿರುವ ಶಿವಗಂಗಾ ಜಲಪಾತ ಶಾಲ್ಮಲಾ ನದಿಯ ಕೂಸು. ಈ ಜಲಪಾತ ಸಮೀಪ ಗಣಪತಿ ಹಾಗೂ ಈಶ್ವರ ಲಿಂಗಗಳಿವೆ.
ಸಮೃದ್ಧ ಹಸಿರು ಪರಿಸರದ ವೈಯ್ಯಾರದಿಂದ ಜಲಪಾತ ಧುಮುಕುತ್ತದೆ. ಇದನ್ನು ನೋಡಲು ದೇಶದ ನಾನಾ ಭಾಗಗಳಿಂದ ಜನ ಬರುತ್ತಾರೆ. ಎರಡು ಶಿಲಾ ರಚನೆಯ ಪದರಗಳ ನಡುವೆ ಜಲಪಾತವಿದೆ. ಜಲಪಾತದ ಹತ್ತಿರ ಹೋಗುವುದು ತೀರಾ ಅಪಾಯಕಾರಿ.