ಮುಂಡಗೋಡ: ಮಳಗಿ ಸಮೀಪದ ಧರ್ಮ ಜಲಾಶಯ ಭರ್ತಿಯಾಗಿದ್ದು, ಇದರ ಪರಿಣಾಮ ಮಳಗಿ-ದಾಸನಕೊಪ್ಪ ರಸ್ತೆಯಲ್ಲಿ ನೀರು ತುಂಬಿಕೊoಡಿದೆ.
ಇಲ್ಲಿನ ಮಿನಿ ಸೇತುವೆ ಮೇಲೆ ನೀರು ಹರಿಯುತ್ತಿರುವ ಕಾರಣ ರಸ್ತೆ ಸಂಚಾರ ಸಾದ್ಯವಿಲ್ಲ. ಮಳೆ ಹೆಚ್ಚಾಗಿರುವುದರಿಂದ ಜಲಾಶಯದ ಒಳಹರಿವು ಜಾಸ್ತಿಯಾಗಿದೆ. ಸಂಚಾರ ಹದಗೆಟ್ಟ ಕಾರಣ ಈ ಭಾಗದ ಜನ ತೊಂದರೆಗೆ ಸಿಲುಕಿದ್ದಾರೆ.