ಕುಮಟಾ: ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ಕಮಾಂಡರ್ ಗಣೇಶ್ ಶಾಸ್ತ್ರಿ ಶುಕ್ರವಾರ ಕುಮಟಾ ಪಟ್ಟಣದಲ್ಲಿ ಓಡಾಡಿ 25 ವರ್ಷದ ಹಿಂದಿನ ಘಟನಾವಳಿಗಳ ಬಗ್ಗೆ ಮೆಲಕು ಹಾಕಿದರು. ಕಾರ್ಗಿಲ್ ಯುದ್ಧ ಗೆದ್ದ ಸಂಭ್ರಮವನ್ನು ಅವರು ಇದೀಗ ಮತ್ತೆ ಆಚರಿಸಿಕೊಂಡರು.
ಆ ವೇಳೆ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ವಿನಾಯಕ ನಾಯ್ಕ ಸಹ ಅವರ ಜೊತೆ ಹೆಜ್ಜೆ ಹಾಕಿ ಅಂದಿನ ಹೋರಾಟದ ಬಗ್ಗೆ ಜನರಿಗೆ ಮಾಹಿತಿ ನೀಡಿದರು. ನಿವೃತ್ತ ಸೈನಿಕರಾದ ನಾರಾಯಣ್ ಗಾವಡಿ, ವಿನಾಯಕ್ ನಾಯ್ಕ, ಜೈವಂತ್, ಮಹೇಶ್ ಹರಿಕಾಂತ, ಮಂಜುನಾಥ್ ಜಿ ಪಟಗಾರ್, ನಾಗರಾಜ್ ಜಿ ನಾಯ್ಕ, ವಿನಾಯಕ್ ನಾಯ್ಕ, ಗಣೇಶ್ ಎಲ್ ನಾಯ್ಕ ಮಿರ್ಜಾನ್ ಸಹ ಎಲ್ಲಡೆ ಓಡಾಡಿ ಯುದ್ಧ ಗೆದ್ದ ಸಡಗರವನ್ನು ಹಂಚಿಕೊoಡರು. `ಯವಾ ಬ್ರೀಗ್ರೆಡ್\’ ಇಂಥ ಅಪರೂಪದ ಕಾರ್ಯಕ್ರಮವನ್ನು ಆಯೋಜಿಸಿದ್ದು, ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಯಿತು. ಕೆಲ ಸೈನಿಕರು ಯುದ್ಧದಲ್ಲಿ ತಮ್ಮ ಆಪ್ತ ದೇಶಭಕ್ತರನ್ನು ಕಳೆದುಕೊಂಡ ಸಾವು-ನೋವುಗಳ ಬಗ್ಗೆ ನೆನಪಿಸಿಕೊಂಡು ಕಣ್ಣೀರಾದರು.
ಈ ವೇಳೆ ಮಾತನಾಡಿದ ಗಣೇಶ ಶಾಸ್ತ್ರಿ `ಭಾರತೀಯ ಸೈನ್ಯದಲ್ಲಿ ಇದೀಗ ಅತ್ಯಾಧುನಿಕ ಆಯುಧಗಳಿವೆ. ದೇಶ ರಕ್ಷಣೆಗೆ ಇದು ಸಹಾಯಕವಾಗಿದ್ದು, ಯುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಸೇನೆ ಸೇರಬೇಕು\’ ಎಂದು ಕರೆ ನೀಡಿದರು. 130ಕ್ಕೂ ಅಧಿಕ ಜನ ಸ್ವಯಂ ಪ್ರೇರಣೆಯಿಂದ ಮ್ಯಾರಥಾನ್\’ನಲ್ಲಿ ಭಾಗವಹಿಸಿದ್ದು ಈ ಎಲ್ಲಾ ಸೈನಿಕರು ಜನರ ಜೊತೆ ಓಡಿ ಅರಿವು ಮೂಡಿಸಿದರು. ಓಟದ ಉದ್ದಕ್ಕೂ `ಭಾರತ ಮಾತಾಕಿ ಜೈ\’ ಎಂಬ ಘೋಷಣೆಗಳು ಮೊಳಗಿದವು. ಅಣ್ಣಪ್ಪ ನಾಯ್ಕ ಈ ಕಾರ್ಯಕ್ರಮ ಸಂಘಟಿಸಿದ್ದು, ಯುವಾ ಬ್ರೀಗೆಡ್ ಸದಸ್ಯರಾದ ಗೌರೀಶ ನಾಯ್ಕ, ಸಚೀನ ಭಂಡಾರಿ ಇತರರು ಸ್ವಚ್ಛತೆ ಕಡೆ ಗಮನಹರಿಸಿದ್ದರು.