ಕುಮಟಾ: ಕತಗಾಲದಿಂದ ಬಂಡಿವಾಳ ತೆರಳುವ ರಸ್ತೆ ನಡುವೆ ಬಿರುಕು ಮೂಡಿದ್ದು, ಕುಸಿಯುವ ಆತಂಕ ಎದುರಾಗಿದೆ. ಹೀಗಾಗಿ ಈ ತಗ್ಗಿನಲ್ಲಿರುವ ಎರಡು ಕುಟುಂಬದವರಿಗೆ ಬೇರೆ ಕಡೆ ಸ್ಥಳಾಂತರವಾಗಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಶೇಡಿಗುಂಡಿ ಭಾಗದಲ್ಲಿ ಗುಡ್ಡ ಕುಸಿಯುವ ಆತಂಕವಿದ್ದು, ಗುಡ್ಡದ ಕೆಳಗೆ ಸಹ ಬಿರುಕು ಮೂಡಿದೆ. ಹೀಗಾಗಿ ಈ ಭಾಗದ 59 ಕುಟುಂಬಗಳಿಗೆ ಬೇರೆ ಕಡೆ ಸ್ಥಳಾಂತರವಾಗುವoತೆ ಗ್ರಾ ಪಂ ಅಧಿಕಾರಿ ವಿ ಎ ಪಟಗಾರ ನೋಟಿಸ್ ನೀಡಿದ್ದಾರೆ. ಆದರೆ, ಈವರೆಗೂ ಜನ ಅಲ್ಲಿಂದ ಕದಲಲಿಲ್ಲ. ಈ ಬಗ್ಗೆ ಅರಿತ ಶಾಸಕ ದಿನಕರ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಜನರ ಮನವೊಲೈಸುವ ಪ್ರಯತ್ನ ನಡೆಸಿದರು.
ಅರಣ್ಯಾಧಿಕಾರಿ ವಿರುದ್ಧ ಜನಾಕ್ರೋಶ
ಶಾಸಕ ದಿನಕರ ಶೆಟ್ಟಿ ಸ್ಥಳ ಪರಿಶೀಲನೆ ನಡೆಸಿದಾಗ ಪೃಕೃತಿ ವಿಕೋಪದ ನೊಡಲ್ ಅಧಿಕಾರಿಯೂ ಆಗಿರುವ ವಲಯ ಅರಣ್ಯಾಧಿಕಾರಿ ಪ್ರೀತಿ ನಾಯ್ಕ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದರು. `ಆ ಅಧಿಕಾರಿ ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ\’ ಎಂದು ದೂರಿದರು. ಈ ವೇಳೆ ಶಾಸಕರು ಅಧಿಕಾರಿಯನ್ನು ತರಾಠೆಗೆ ತೆಗೆದುಕೊಂಡು `ಜವಾಬ್ದಾರಿಯಿಂದ ಕೆಲಸ ಮಾಡಿ\’ ಎಂದು ಸೂಚಿಸಿದರು.
ಸ್ಥಳಾಂತರ ಎಂದರೆ ಹೋಗುವುದಾದರೂ ಎಲ್ಲಿ?
`ನೋಟಿಸ್ ಸ್ವೀಕರಿಸಿದ ಎಲ್ಲಾ ಕುಟುಂಬದವರಿಗೆ ಕತಗಾಲ ಪ್ರೌಢಶಾಲೆಯಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಆರು ದಿನದ ಅವಧಿಯಲ್ಲಿ ಹಂತ ಹಂತವಾಗಿ ಗುಡ್ಡ ಕುಸಿದಿದ್ದು, 30 ಮನೆಗಳಿ ಅಪಾಯ ಹೆಚ್ಚಿದೆ. ಈ ಹಿನ್ನಲೆಯಲ್ಲಿ ಅವರಿಗೆ ಸ್ಥಳಾಂತರವಾಗುವAತೆ ಸೂಚಿಸಲಾಗಿದೆ\’ ಎಂದು ಕತಗಾಲ ಪಿಡಿಓ ವಿ ಎ ಪಟಗಾರ ತಿಳಿಸಿದರು.