ಯಲ್ಲಾಪುರ: ನಿರಂತರ ವಿದ್ಯುತ್ ಸಮಸ್ಯೆಯಿಂದ ಬೇಸತ್ತ ಗುಳ್ಳಾಪುರದ ಜನ ಹೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಜುಲೈ 30ರ ಬೆಳಗ್ಗೆ 10 ಗಂಟೆಗೆ ಪ್ರತಿಭಟನೆಗೆ ಕರೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಭಾಗವಹಿಸುವುದಕ್ಕಾಗಿ ಅನೇಕರು ತಯಾರಿ ನಡೆಸಿದ್ದು, ಜನರ ಸಮಸ್ಯೆ ಆಲಿಸಲು ಅಧಿಕಾರಿಗಲು ಸಹ ಭಾಗವಹಿಸುವ ನಿರೀಕ್ಷೆಯಿದೆ. ಇಡಗುಂದಿ, ಡೋಂಗ್ರಿ ಹಾಗೂ ಸುಂಕಸಾಳ ಭಾಗದಲ್ಲಿ ಮಳೆಗಾಲ ಶುರುವಾದಾಗಲಿನಿಂದಲೂ ವಿದ್ಯುತ್ ಸಮಸ್ಯೆ ಜೋರಾಗಿದೆ. ಸಣ್ಣಪುಟ್ಟ ಕಾರಣಗಳಿಗೂ ವಿದ್ಯುತ್ ಸ್ಥಗಿತವಾಗುತ್ತಿದ್ದು, ಇದರಿಂದ ಸಾಕಷ್ಟು ಜನ ಸಮಸ್ಯೆ ಅನುಭವಿಸಿದ್ದಾರೆ. ಈ ಹಿನ್ನಲೆ ಹೆಸ್ಕಾಂ ಗ್ರಿಡ್\’ಗೆ ಮುತ್ತಿಗೆ ಹಾಕಲು ಸ್ಥಳೀಯರು ನಿರ್ಧರಿಸಿದ್ದಾರೆ. ಜೊತೆಗೆ ಹೆದ್ದಾರಿ ತಡೆ ಮಾಡುವ ಬಗ್ಗೆಯೂ ಎಚ್ಚರಿಸಿದ್ದಾರೆ.
ಮೂರು ದಿನದ ಹಿಂದೆ ವಿದ್ಯುತ್ ಸಮಸ್ಯೆಯಿಂದ ಬೇಸತ್ತ ವಜ್ರಳ್ಳಿ ಜನ ಸಹ ಅಲ್ಲಿನ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದರು. ಅಧಿಕಾರಿಗಳ ಭರವಸೆ ಹಿನ್ನಲೆ ಪ್ರತಿಭಟನೆ ಹಿಂಪಡೆದಿದ್ದರು. ಆದರೆ, ಗುಳ್ಳಾಪುರ ಭಾಗದವರು `ಸರಿಯಾದ ವಿದ್ಯುತ್ ಸಂಪರ್ಕ ನೀಡುವವರೆಗೂ ಪ್ರತಿಭಟನೆ ಹಿಂಪಡೆಯಲ್ಲ\’ ಎಂದು ಎಚ್ಚರಿಸಿದ್ದಾರೆ. `ಅಧಿಕಾರಿಗಳು ಭರವಸೆ ನೀಡುವ ಬದಲು ಕೆಲಸ ಮಾಡಿ ತೋರಿಸಲಿ\’ ಎಂದು ಆ ಭಾಗದವರು ಹೇಳಿದ್ದಾರೆ.