ಮನೆಯನ್ನು ಮಾದಕ ವಸ್ತು ಸಂಗ್ರಹಾಲಯವನ್ನಾಗಿಸಿಕೊoಡಿದ್ದ ಮದನೂರಿನ ಮಹಿಳೆ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಮನೆಯಲ್ಲಿ ಸಿಕ್ಕ ಗಾಂಜಾವನ್ನು ವಶಕ್ಕೆಪಡೆದು ಕಾನೂನುಕ್ರಮ ಜರುಗಿಸಿದ್ದಾರೆ.
ಯಲ್ಲಾಪುರ ತಾಲೂಕಿನ ಮದನೂರು ಗೌಳಿವಾಡ ಸಗ್ಗಿ ಪಾಟೀಲ ಅವರು ತಮ್ಮ ಮನೆಯಲ್ಲಿ ಗಾಂಜಾ ದಾಸ್ತಾನು ಮಾಡಿಕೊಂಡಿದ್ದರು. ಮನೆಯಲ್ಲಿಯೇ ಕುಳಿತು ಅವರು ಮಾದಕ ವಸ್ತುಗಳ ವ್ಯಾಪಾರ ಮಾಡುತ್ತಿದ್ದರು. ಈ ವಿಷಯ ಅರಿತ ಪೊಲೀಸರು ಸಗ್ಗಿ ಪಾಟೀಲ ಅವರ ಮನೆ ಮೇಲೆ ದಾಳಿ ಮಾಡಿದರು.
ಸಹಾಯಕ ಪೊಲೀಸ್ ಉಪನಿರೀಕ್ಷಕ ನೀಲಕಂಠ ಆಚಾರಿ ಅವರು ಸಗ್ಗಿ ಪಾಟೀಲ ಅವರ ಮನೆ ಶೋಧ ನಡೆಸಿದರು. ಆಗ ಅಲ್ಲಿ ಗಾಂಜಾ ಕಾಣಿಸಿತು. ವಿಚಾರಣೆ ನಡೆಸಿದಾಗ ಮಾರಾಟಕ್ಕೆ ತಂದಿರುವುದಾಗಿಯೂ ಸಗ್ಗಿ ಪಾಟೀಲ ಒಪ್ಪಿಕೊಂಡರು. ಈ ಹಿನ್ನಲೆ ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು.
ಪಿಎಸ್ಐ ಮಹಾವೀರ ಕಾಂಬಳೆ ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಆರೋಪಿ ಸಗ್ಗಿ ಪಾಟೀಲ್ ಅವರ ವಿಚಾರಣೆ ಮುಂದುವರೆದಿದೆ.
