ಯಲ್ಲಾಪುರದ ಬಾರೆಯ ಜನಾರ್ಧನ ಭಟ್ಟ ಅವರು ಓಡಿಸುತ್ತಿದ್ದ ಟಾಕ್ಸಿ ಬೀಗಾರಿನ ಶಂಕರ್ ಭಟ್ಟ ಅವರ ಬೈಕಿಗೆ ಗುದ್ದಿದೆ. ಪರಿಣಾಮ ಶಂಕರ್ ಭಟ್ಟ ಅವರು ಗಾಯಗೊಂಡು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ಎಂಟು ತಿಂಗಳ ವಿಶ್ರಾಂತಿ ನಂತರ ಇದೀಗ ಕಾನೂನು ಹೋರಾಟ ಶುರು ಮಾಡಿದ್ದಾರೆ.
2024ರ ಅಕ್ಟೊಬರ್ 31ರಂದು ಯಲ್ಲಾಪುರದ ಜನಾರ್ಧನ ಭಟ್ಟ ಅವರು ತಮ್ಮ ಟಾಕ್ಸ್ ತುಫಾನ್ ಓಡಿಸಿಕೊಂಡು ಮಲವಳ್ಳಿಯ ಕಡೆ ಓಡಿಸುತ್ತಿದ್ದರು. ಈ ವೇಳೆ ಬೀಗಾರಿನ ಶಂಕರ ಭಟ್ಟ ಅವರು ತಮ್ಮ ಬೈಕಿನಲ್ಲಿ ಯಲ್ಲಾಪುರದ ಕಡೆ ಬರುತ್ತಿದ್ದರು. ಟಾಕ್ಸಿ ತುಫಾನ್ ಏಕಾಏಕಿ ಬಲಬದಿಗೆ ಸಂಚರಿಸಿದ್ದರಿoದ ಬೈಕಿಗೆ ಗುದ್ದಿತು.
ಆಗ ಬೈಕಿನ ಮೇಲಿದ್ದ ಶಂಕರ ಭಟ್ಟರು ನೆಲಕ್ಕೆ ಬಿದ್ದರು. ಬಿದ್ದ ರಭಸಕ್ಕೆ ಅವರ ಕಣ್ಣಿಗೆ ಪೆಟ್ಟಾಯಿತು. ಮೊಣಕಾಲು ಮುರಿಯಿತು. ಬೈಕ್ ನುಚ್ಚು ನೂರಾಯಿತು. ಅದೇ ದಿನ ಅವರು ಯಲ್ಲಾಪುರ ಆಸ್ಪತ್ರೆಗೆ ದಾಖಲಾದರು. ಹೆಚ್ಚಿನ ಚಿಕಿತ್ಸೆಗಾಗಿ ಶಿರಸಿಯ ಶಿವಂ ಸ್ಪೆಶಾಲಿಟಿ ಆಸ್ಪತ್ರೆಗೆ ಹೋದರು. ಅಲ್ಲಿಯೂ ಸಮಸ್ಯೆ ಬಗೆಹರಿಯದ ಕಾರಣ ಮಣಿಪಾಲಿನ ಕಸ್ತೂರಿಬಾ ಆಸ್ಪತ್ರೆಗೆ ಹೋಗಿ ದಾಖಲಾದರು.
ಅಲ್ಲಿ ಶಂಕರ ಭಟ್ಟ ಅವರಿಗೆ ಶಸ್ತç ಚಿಕಿತ್ಸೆ ಮಾಡಲಾಯಿತು. ವೈದ್ಯರ ಸಲಹೆ ಮೇರೆ ಅವರು ಎಂಟು ತಿಂಗಳ ಕಾಲ ವಿಶ್ರಾಂತಿಪಡೆದು ಹಂತ ಹಂತವಾಗಿ ಚೇತರಿಸಿಕೊಂಡರು. ಇದೀಗ ಜೋರಾಗಿ ಟಾಕ್ಸಿ ಓಡಿಸಿ ಅಪಘಾತಪಡಿಸಿದ ಬಾರೆಯ ಜನಾರ್ಧನ ಭಟ್ಟ ಅವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಎಂಟು ತಿಂಗಳ ನಂತರ ಕಾನೂನು ಹೋರಾಟ ಶುರು ಮಾಡಿದರು.
