ಯಲ್ಲಾಪುರದ ಸಹಸ್ರಳ್ಳಿಯಲ್ಲಿ ಅತಿಕ್ರಮಣ ಜಾಗದಲ್ಲಿ ಮನೆ ನಿರ್ಮಾಣ ನಡೆಯುತ್ತಿದ್ದು, ಅದನ್ನು ತಡೆಯಲು ಹೋದ ದುರ್ಗಾಗಲ್ಲಿಯ ಅಬ್ದುಲ್ ಖಾನ್ ಹೊಡೆತ ತಿಂದಿದ್ದಾರೆ.
ಸಹಸ್ರಳ್ಳಿ ಸವೇ ನಂ 62ರ ಕುರಿತು ನ್ಯಾಯಾಲಯದಲ್ಲಿ ತಕರಾರು ನಡೆಯುತ್ತಿದೆ. ಆ ಭೂಮಿ ಅಂಚಿನ ಅತಿಕ್ರಮಣದಲ್ಲಿ ಸಹಸ್ರಳ್ಳಿಯ ಹೈದರ್ ಉಸ್ಮಾನ್ ಹಾಗೂ ಅಸ್ಕಪ್ ಶೇಖ್ ಮನೆ ಕಟ್ಟುತ್ತಿದ್ದಾರೆ.
ಈ ವಿಷಯ ಅರಿತ ಅಕ್ಬರ ಗಲ್ಲಿಯ ಮೈದೀನ್ ಶೇಖ್ ಅವರು ಮನೆ ನಿರ್ಮಾಣ ತಡೆಯುವ ಪ್ರಯತ್ನ ಮಾಡಿದ್ದರು. ಅದಕ್ಕಾಗಿ ಅವರು ದುರ್ಗಾಗಲ್ಲಿಯ ಅಕ್ಕನಮಗ ಅಬ್ದುಲ್ ಖಾನ್ ಅವರ ಜೊತೆ ಜೂನ್ 25ರಂದು ಸ್ಥಳಕ್ಕೆ ಹೋಗಿದ್ದರು. ಅಲ್ಲಿದ್ದ ಎದುರುದಾರರ ಬಳಿ `ಮನೆ ನಿರ್ಮಾಣ ಕೆಲಸ ನಿಲ್ಲಿಸಿ’ ಎಂದು ಸೂಚಿಸಿದ್ದರು.
ಇದರಿಂದ ಸಿಟ್ಟಾದ ಹೈದರ್ ಉಸ್ಮಾನ್ ಹಾಗೂ ಅಸ್ಕಪ್ ಶೇಖ್ ದುರ್ಗಾಗಲ್ಲಿಯ ಅಕ್ಕನಮಗ ಅಬ್ದುಲ್ ಖಾನ್ ಅವರನ್ನು ಗಟ್ಟಿಯಾಗಿ ಹಿಡಿದುಕೊಂಡರು. ಅಬ್ದುಲ್ ಖಾನ್ ಅವರ ಕೆನ್ನೆಗೆ ಬಾರಿಸಿದರು. ಅದಾದ ನಂತರ ಬೆನ್ನಿಗೂ ಗುದ್ದಿ ನೋವುಂಟು ಮಾಡಿದರು.
ಹೊಡೆದಾಟ ನೋಡಿದ ಮೈದೀನ್ ಶೇಖ್ ಅವರಿಂತ ತಪ್ಪಿಸಿಕೊಂಡು ಪೇಟೆಗೆ ಬಂದರು. ಅದಾದ ನಂತರ ಪೊಲೀಸ್ ಠಾಣೆಗೆ ತೆರಳಿ ಘಟನಾವಳಿಗಳ ಬಗ್ಗೆ ವಿವರಿಸಿದರು. ನ್ಯಾಯಾಲಯಕ್ಕೆ ತೆರಳಿ ನ್ಯಾಯಾಧೀಶರಿಂದ ಪೊಲೀಸರಿಗೆ ಸೂಚನೆ ಹೊರಡಿಸಿ ಹೊಡೆದಾಟ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸಿದರು.
Discussion about this post