ಕಾರವಾರ: ನಂದನಗದ್ದಾದ ಸಣ್ಣಮಸಿದಿ ಬಳಿಯ ತುಷಾರ್ ತಾರಿ (18) ಮೇಲೆ ಅದೇ ಊರಿನ ಪ್ರೇಮಾನಂದ ಗಾವಡೆ (45) ಹಲ್ಲೆ ನಡೆಸಿದ್ದಾರೆ. ಪ್ರೇಮಾನಂದ ಅವರ ಅತ್ತೆ ಶೈಲಜಾ ಅಂಕೋಲೆಕರ್ ಮನೆಗೆ ಹೋದ ತಪ್ಪಿಗೆ ತುಷಾರ್ ಹೊಡೆತ ತಿಂದಿದ್ದಾರೆ.
ಮೀನುಗಾರಿಕೆ ನಡೆಸುವ ತುಷಾರ್ ತಾರಿ ನಂದನಗದ್ದಾದ ಸಣ್ಣ ಮಸೀದಿ ಎದುರು ಜೂನ್ 6ರ ರಾತ್ರಿ 9 ಗಂಟೆಗೆ ಸ್ನೇಹಿತನೊಂದಿಗೆ ಫೋನಿನಲ್ಲಿ ಹರಟುತಿದ್ದರು. ಮನೆ ಮುಂದಿನ ದೋಣಿಯ ಮೇಲೆ ಕುಳಿತಿದ್ದ ತುಷಾರ್\’ಗೆ ಹಿಂದಿನಿoದ ಪ್ರೇಮಾನಂದ ಗಾವಡೆ ಬಂದಿದ್ದು ಗೊತ್ತಾಗಲಿಲ್ಲ. ಆಗ ಪ್ರೇಮಾನಂದ ಗಾವಡೆ ಏಕಾಏಕಿ ತುಷಾರ್ ತಾರಿ ಅವರ ಬೆನ್ನ ಮೇಲೆ ಗುದ್ದಿದ್ದು, ನಂತರ ಕೈ ತಿರುಗಿಸಿ ಮತ್ತೆ ಬುಜಗಳಿಗೂ ನೋವಾಗುವಂತೆ ಮಾಡಿದ್ದಾರೆ. `ನನ್ನ ಅತ್ತೆ ಮನೆ ನೋಡಲು ಹೋಗುತ್ತಿಯಾ?\’ ಎಂದು ಪ್ರಶ್ನಿಸಿ ಬೈದು ಮತ್ತೆರಡು ಬಾರಿಸಿದ್ದಾರೆ.
ಈ ಬಗ್ಗೆ ನೊಂದ ತುಷಾರ್ ತಾರಿ ಮರುದಿನ ಪೊಲೀಸ್ ದೂರು ನೀಡಿದ್ದು, ಜುಲೈ 27ರಂದು ನ್ಯಾಯಾಲಯದ ಸೂಚನೆ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.