ಶಿರಸಿ: `ಅತಿಯಾಗಿ ಸುರಿದ ಮಳೆಯಿಂದ ಸಾಗುವಳಿ ಕ್ಷೇತ್ರ ಹಾಳಾಗಿದ್ದು, ಅತಿಕ್ರಮಣ ಸಾಗುವಳಿದಾರರಿಗೆ ಸಹ ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕು\’ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಒತ್ತಾಯಿಸಿದ್ದಾರೆ.
`ಜಿಲ್ಲೆಯ ಎಲ್ಲಡೆ ಅಡಿಕೆ, ತೆಂಗು, ಬಾಳೆ, ಭತ್ತ ಸೇರಿ ಹಲವು ಬೆಳೆ ಮಳೆಯಿಂದ ನಷ್ಟವಾಗಿದೆ. ಸರ್ಕಾರ ಇದಕ್ಕೆ ಯೋಗ್ಯ ಪರಿಹಾರ ನೀಡಬೇಕು. ಜೊತೆಗೆ ಅರಣ್ಯ ಅತಿಕ್ರಮಣದಾರರ ಬಗ್ಗೆಯೂ ಸರ್ಕಾರಕ್ಕೆ ಕಾಳಜಿ ಬೇಕು\’ ಎಂದವರು ಹೇಳಿದ್ದಾರೆ.
`ಪಹಣಿ ಪತ್ರಿಕೆಯಲ್ಲಿ ಹೆಸರಿರುವ ಭೂ ಮಾಲೀಕನಿಗೆ ಬೆಳೆ ನಷ್ಟ ಶೇ 33 ಕ್ಕಿಂತ ಹೆಚ್ಚು ನಷ್ಟ ಉಂಟಾದಲ್ಲಿ ಪರಿಹಾರ ನೀಡಲು ಕೇಂದ್ರ ಸರ್ಕಾರದ ಎನ್ ಡಿ ಆರ್ ಎಫ್ ಮಾರ್ಗದರ್ಶನವಿದ್ದು, ಅತಿಕ್ರಮಣದಾರರನ್ನು ಈ ನಿಯಮದ ಅಡಿ ಪರಿಗಣನೆಗೆ ತೆಗೆದುಕೊಳ್ಳಬೇಕು\’ ಎಂದು ಅವರು ಆಗ್ರಹಿಸಿದರು.