ಕಾರವಾರ: ಕಾಂಗ್ರೆಸ್ ಸರ್ಕಾರದ ಹಗರಣಗಳ ತನಿಖೆಗೆ ಆಗ್ರಹಿಸಿ ಬಿಜೆಪಿ ಬೆಂಗಳೂರಿಗೆ ಪಾದಯಾತ್ರೆ ಆಯೋಜಿಸಿದೆ.
ಅಗಸ್ಟ್ 4ರಂದು ಮೈಸೂರಿನಲ್ಲಿ ಪ್ರತಿಭಟಸಲು ಸಿದ್ಧತೆ ನಡೆದಿದ್ದು, ಮಾಜಿ ಶಾಸಕಿ ರೂಪಾಲಿ ನಾಯ್ಕ ಕಾರವಾರದ ಜನರು ಇದರಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದ್ದಾರೆ. `ದಲಿತರಿಗೆ ಸಿಗಬೇಕಾದ ಸೌಲಭ್ಯಗಳನ್ನು ಕಾಂಗ್ರೆಸ್ ಸರ್ಕಾರ ದೋಚಿದೆ. ಮೂಡಾ ಹಗರಣ, ವಾಲ್ಮಿಕಿ ಹಗರಣದ ಪರಿಣಾಮ ಭಾಗ್ಯ ಯೋಜನೆಗಳು ನಿಂತಿವೆ\’ ಎಂದು ದೂರಿದರು. `ಅಗಸ್ಟ್ 4ರಲ್ಲಿ ಜಿಲ್ಲೆಯ ಪ್ರತಿ ಮಂಡಳದಿoದ ಕನಿಷ್ಟ 10 ಜನ ಅಲ್ಲಿರಬೇಕು\’ ಎಂದು ಸೂಚಿಸಿದರು.