ದಾಂಡೇಲಿ ಅಂಬೇವಾಡಿಯ ಅರುಣಾದ್ರಿ ರಾವ್ ಅವರ ಮನೆಗೆ ಜುಲೈ 31ರ ಬೆಳಗ್ಗೆ ಮೊಸಳೆ ಆಗಮಿಸಿದ್ದು, ಉರಗ ತಜ್ಞರು ಆಗಮಿಸಿ ಅದನ್ನು ಹಿಡಿದು ನದಿ ದಡಕ್ಕೆ ಬಿಟ್ಟರು.
ಮನೆಗೆ ಬಂದ ಮೊಸಳೆ ನೋಡಲು ನೂರಾರು ಜನ ಜಮಾಯಿಸಿದ್ದರು. ಇಂಡಿಯನ್ ಗ್ಯಾಸ್ ಕಚೇರಿ ಬಳಿ ಸುತ್ತಾಡಿದ ಮೊಸಳೆ ರಾವ್ ಅವರ ಮನೆ ಬಾಗಿಲ ಬಳಿ ನಿಂತಿದ್ದು, ಬೆಳಗ್ಗೆ ಬಾಗಿಲು ತೆಗೆದ ತಕ್ಷಣ ಒಳಗೆ ನುಗ್ಗುವ ಪ್ರಯತ್ನ ನಡೆಸಿತು. ಇದನ್ನು ನೋಡಿದ ಮನೆಯವರು ಅಚ್ಚರಿಗೆ ಒಳಗಾದರು. ನಂತರ ಉರಗ ತಜ್ಞ ರಜಾಕ್ ಶಾ ಅವರಿಗೆ ವಿಷಯ ತಿಳಿಸಿದ್ದು, ಅವರು ತಮ್ಮ ಸಹಚರರನ್ನು ಕಳುಹಿಸಿ ಮೊಸಳೆ ಹಿಡಿಸಿದರು.