ಯಲ್ಲಾಪುರ: ಕಾಳಮ್ಮನಗರದ ಸಂಕೇತ ನಾಯಕ ಹಾಗೂ ಚೇತನ ಭಟ್ಟ ಎಂಬಾತರಿಗೆ ಸೇರಿದ ಟಿಪ್ಪರ್\’ಗಳ ಬ್ಯಾಟರಿ ಕಳ್ಳರ ಪಾಲಾಗಿದೆ.
40 ಸಾವಿರ ರೂಪಾಯಿಯ ಬ್ಯಾಟರಿ ಹಾಗೂ 2500ರೂ ಮೌಲ್ಯದ ಹೈಡ್ರಾಲಿಕ್ ಜಾಕ್ ಕದ್ದವರನ್ನು ಹಿಡಿದು ಆ ವಸ್ತುಗಳನ್ನು ನಮಗೆ ಮರಳಿಸಿ ಎಂದು ಸಂಕೇತ ನಾಯಕ ಪೊಲೀಸ್ ದೂರು ನೀಡಿದ್ದಾರೆ. ಜುಲೈ 14ರಿಂದ ಜುಲೈ 21ರ ನಡುವಿನ ಅವಧಿಯಲ್ಲಿ ಈ ಕಳ್ಳತನ ನಡೆದಿದೆ. ಒಟ್ಟು ನಾಲ್ಕು ಟಿಪ್ಪರಿನ ಬ್ಯಾಟರಿಗಳನ್ನು ಕಳ್ಳರು ದೋಚಿದ್ದಾರೆ.