
ಹೊನ್ನಾವರ: ಜುಲೈ 25ರಂದು ಬೈಕಿನಿಂದ ಬಿದ್ದು ಗಾಯಗೊಂಡಿದ್ದ ನವಿಲುಗೋಣದ ಗಣಪತಿ ಕುಪ್ಪು ಗೌಡ (50) ಮಂಗಳೂರು ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾರೆ.
ಕಡತೋಕಾ ಸಿದ್ದನಕೇರಿ ಬಳಿ ಬೈಕಿನಿಂದ ಬಿದ್ದು ಗಾಯಗೊಂಡಿದ್ದ ಅವರನ್ನು ಹೊನ್ನಾವರ ಆಸ್ಪತ್ರೆಗೆ ಸಾಗಿಸಲಾಗಿತ್ತು. ತಲೆ ಹಾಗೂ ಬೆನ್ನಿಗೆ ಭಾರೀ ಪ್ರಮಾಣದ ಪೆಟ್ಟು ಬಿದ್ದಿದ್ದರಿಂದ ಹೊನ್ನಾವರ ಆಸ್ಪತ್ರೆಯವರು ಮಂಗಳೂರಿಗೆ ಶಿಫಾರಸ್ಸು ಮಾಡಿದ್ದರು. ಅದರಂತೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿದ್ದು, ಜುಲೈ 30ರಂದು ಅವರು ಸಾವನಪ್ಪಿದ ಬಗ್ಗೆ ಆಸ್ಪತ್ರೆಯವರು ಪೊಲೀಸರಿಗೆ ಇಮೇಲ್ ಮಾಡಿದ್ದಾರೆ.