ಆಹಾರ ಅರೆಸಿ ಕಾಡಿನಿಂದ ನಾಡಿಗೆ ಬಂದ ಜಿಂಕೆ ಮುಂಡಗೋಡಿನಲ್ಲಿ ತಂತಿ ಬೇಲಿಗೆ ಸಿಕ್ಕಿ ಬಿದ್ದಿದ್ದು, ಇದನ್ನು ನೋಡಿದ ಊರಿನವರು ವನ್ಯಜೀವಿಯ ಜೀವ ಉಳಿಸಿದ್ದಾರೆ.
ಮುಂಡಗೋಡ ಸನವಳ್ಳಿ ಬಳಿಯ ಬಪ್ಪಲಕಟ್ಟಿಯಲ್ಲಿ ಗುರುವಾರ ಬೆಳಗ್ಗೆ ಜಿಂಕೆ ಬೇಲಿಗೆ ಸಿಕ್ಕಿ ಬಿದ್ದಿತ್ತು. ಹೊಲದ ಸುತ್ತಲು ಹಾಕಿದ ಬೇಲಿಯಿಂದ ತಪ್ಪಿಸಿಕೊಳ್ಳಲು ಆ ಜೀವಿಯಿಂದ ಸಾಧ್ಯವಾಗುತ್ತಿರಲಿಲ್ಲ. ಸಾಕಷ್ಟು ಗುದ್ದಾಡಿದ ನಂತರ ಬೇಲಿಯನ್ನು ಮುರಿದಿದ್ದು. ತಲೆ ಮಾತ್ರ ಬೇಲಿಯೊಳಗೆ ಸಿಕ್ಕಿ ಜಿಂಕೆ ಪರಿತಪಿಸುತ್ತಿತ್ತು.
ಸನವಳ್ಳಿ ಬಳಿಯ ಬಪ್ಪಲಕಟ್ಟಿಯ ಬಸವರಾಜ ಶೆರವಾಡ್ ಅವರ ಹೊಲದಲ್ಲಿ ಜಿಂಕೆಯಿರುವುದನ್ನು ರೈತ ಮುಖಂಡರಾದ ರಾಜು ಗುಬ್ಬಕ್ಕನವರ್ ನೋಡಿದರು. ತಕ್ಷಣ ಅವರು ಅರಣ್ಯ ಇಲಾಖೆಗೆ ಫೋನ್ ಮಾಡಿದರು. ಅರಣ್ಯ ಸಿಬ್ಬಂದಿ ಅಲ್ಲಿಗೆ ಆಗಮಿಸಿ ನಾಜೂಕಿನಿಂದ ಜಿಂಕೆಯನ್ನು ಬೇಲಿಯಿಂದ ಬಿಡುಗಡೆ ಮಾಡಿದರು. ತಪ್ಪಿಸಿಕೊಂಡ ಜಿಂಕೆ ಕಾಡಿನ ಕಡೆ ಓಡಿತು.
ಅರಣ್ಯ ಇಲಾಖೆಯ ರಾಜು ಪರೇಟದ, ಕೃಷ್ಣ, ರಾಘು ಕೋಣನಕೇರಿ, ರುದ್ರಪ್ಪ ಈ ಕಾರ್ಯಾಚರಣೆಯಲ್ಲಿದ್ದರು.
Discussion about this post