ಕಾರವಾರ: ಬಾಡ ಕಳಸೆಟ್ಟಾದ ವಿನಯಪ್ರಸಾದ ನಾಯ್ಕ (25) ಎಂಬಾತನ ಮೇಲೆ ಆತನ ಸ್ನೇಹಿತ ಓಂಕಾರ ಕೋಳಂಬಕರ್ ಹಲ್ಲೆ ಮಾಡಿದ್ದಾನೆ.
ಮರ್ಚಂಟ್ ನೇವಿಯಲ್ಲಿ ಕೆಲಸ ಮಾಡುವ ವಿನಯಪ್ರಸಾದ 3 ತಿಂಗಳ ಹಿಂದೆ ರಜೆ ಪಡೆದು ಊರಿಗೆ ಬಂದಿದ್ದ. ಜುಲೈ 30ರಂದು ಮಾಲಾದೇವಿ ಮೈದಾನದಲ್ಲಿ ಆಟವಾಡುತ್ತಿದ್ದ. ಆಗ ಅಲ್ಲಿಗೆ ಬಂದು ಅಡ್ಡಗಟ್ಟಿದ ಓಂಕಾರ್ ಏಕಾಏಕಿ ಹಲ್ಲೆ ನಡೆಸಿದ ಬಗ್ಗೆ ವಿನಯಪ್ರಸಾದ ದೂರಿದ್ದಾರೆ. ಆತ ತನ್ನ ಸ್ನೇಹಿತನಾಗಿದ್ದರೂ ಹಳೆಯ ದ್ವೇಷದ ಕಾರಣ ಹಲ್ಲೆ ನಡೆಸಿದ್ದಾನೆ ಎಂದು ವಿನಯಪ್ರಸಾದ ಹೇಳಿದ್ದಾರೆ. ವಿನಯಪ್ರಸಾದ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದಿದ್ದಾರೆ.