ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಶಿರಸಿಯ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಗುತ್ತಿಗೆದಾರರ ಸಂಕಷ್ಟ ನೀಗಿಸಲು ಹೋರಾಟ ನಡೆಸುವುದಾಗಿ ಘೋಷಿಸಿದ್ದಾರೆ.
`ಕೆಲಸ ಮಾಡಿಸಿಕೊಂಡ ಸರ್ಕಾರ ಗುತ್ತಿಗೆದಾರರ ಹಣ ಬಿಡುಗಡೆ ಮಾಡಿಲ್ಲ. ಎರಡು ವರ್ಷದಿಂದ ಹಣ ಬಿಡುಗಡೆಯಾಗದ ಕಾರಣ ಗುತ್ತಿಗೆದಾರರ ಪರಿಸ್ಥಿತಿ ಹದಗೆಟ್ಟಿದೆ. ಗುತ್ತಿಗೆದಾರರು ಜೀವನ ನಿರ್ವಹಣೆಗೂ ದುಡ್ಡಿಲ್ಲದೇ ಸಮಸ್ಯೆಯಲ್ಲಿದ್ದಾರೆ. ಅವರಿಗೆ ಬಾಕಿ ಮೊತ್ತ ಪಾವತಿ ಆಗದೇ ಇದ್ದರೆ ಹೋರಾಟ ನಿಶ್ಚಿತ’ ಎಂದು ಹೇಳಿದ್ದಾರೆ.
`ಗುತ್ತಿಗೆದಾರರು ಬ್ಯಾಂಕ್ ಸಾಲ ಮಾಡಿ ಸರ್ಕಾರಿ ಕೆಲಸ ಮಾಡಿದ್ದಾರೆ. ಆದರೆ, ಸರ್ಕಾರ ಅವರ ಬಾಕಿ ಮೊತ್ತ ಪಾವತಿಸದೇ ಕಾಡಿಸುತ್ತಿದೆ. ಇದರಿಂದ ಗುತ್ತಿಗೆದಾರರು ಯಂತ್ರೋಪಕರಣ ಮಾರಾಟ ಮಾಡಿ ಸಾಲ ಮರುಪಾವತಿಸುವ ಸ್ಥಿತಿ ತಲುಪಿದ್ದಾರೆ’ ಎಂದು ಅನಂತಮೂರ್ತಿ ಹೆಗಡೆ ಹೇಳಿದ್ದಾರೆ.
`ನಿಯಮಾವಳಿಗಳ ಪ್ರಕಾರ ಕೆಲಸ ಮುಗಿದ 2 ತಿಂಗಳ ಒಳಗೆ ಹಣ ಪಾವತಿ ಆಗಬೇಕು. ಆದರೆ, ಆ ನಿಯಮ ಪಾಲನೆ ಆಗಿಲ್ಲ. 11.38 ಕೋಟಿ ರೂ ಜಿಲ್ಲೆಯ ಗುತ್ತಿಗೆದಾರರಿಗೆ ಪಾವತಿ ಆಗಬೇಕಿದೆ. ರಸ್ತೆ ಹೊಂಡ ಮುಚ್ಚಿದ ಹಣವನ್ನು ಸಕಾರ ನೀಡಿಲ್ಲ’ ಎಂದು ದೂರಿದ್ದಾರೆ.
Discussion about this post