ಎಲ್ಲರ ಜೊತೆ ಅನ್ಯೋನ್ಯವಾಗಿದ್ದ ಅನ್ನಪೂರ್ಣೇಶ್ವರಿ ದಿಢೀರ್ ಆಗಿ ಆತ್ಮಹತ್ಯೆಯ ನಿರ್ಧಾರ ಮಾಡಿದ್ದಾರೆ. ಮುಂಡಗೋಡಿನ ಮನೆಯಲ್ಲಿ ಅವರು ನೇಣಿಗೆ ಶರಣಾಗಿದ್ದಾರೆ.
20 ವರ್ಷದ ಅನ್ನಪೂರ್ಣೇಶ್ವರಿ ಲಮಾಣಿ ಅವರು ಮುಂಡಗೋಡಿನ ಅಗಡಿ ಗ್ರಾಮದಲ್ಲಿ ವಾಸವಾಗಿದ್ದರು. ಎಲ್ಲರ ಜೊತೆ ಅವರು ಎಂದಿನoತೆ ಅನ್ಯೋನ್ಯವಾಗಿದ್ದರು. ನಿನ್ನೆ ಅವರು ಕೊಂಚ ಮಂಕಾಗಿದ್ದು, ಇದಕ್ಕೆ ಯಾರಿಗೂ ಕಾರಣ ಹೇಳಿರಲಿಲ್ಲ. ಅದಾಗಿ ಕೆಲವೇ ಗಂಟೆಗಳ ಅವಧಿಯಲ್ಲಿ ಅವರು ಆತ್ಮಹತ್ಯೆಯ ನಿರ್ಧಾರ ಮಾಡಿದರು.
ಮನೆಯ ಜಂತಿಗೆ ಹಗ್ಗ ಬಿಗಿದುಕೊಂಡ ಅನ್ನಪೂರ್ಣೇಶ್ವರಿ ಅವರು ಅಲ್ಲಿ ಕುತ್ತಿಗೆ ಸಿಲಿಕಿಸಿಕೊಂಡು ನೇತಾಡಿದರು. ಕುಟುಂಬದವರು ನೋಡಿದ ನಂತರ ಅವರ ಆತ್ಮಹತ್ಯೆಗೆ ಪ್ರಯತ್ನಿಸಿರುವುದು ಬೆಳಕಿಗೆ ಬಂದಿತು. ಅಷ್ಟರೊಳಗೆ ಅನ್ನಪೂರ್ಣೇಶ್ವರಿ ಅವರು ಸಾವನಪ್ಪಿದ್ದರು. ಮುಂಡಗೋಡು ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದಾರೆ.
Discussion about this post