ಉತ್ತರ ಕನ್ನಡ ಜಿಲ್ಲೆಯ ಹಲವು ಕಡೆ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಅದರಲ್ಲಿಯೂ ಕಾಳಿ ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ಕಾರವಾರದ ಕದ್ರಾ ಅಣೆಕಟ್ಟಿನಿಂದ ನೀರು ಹೊರಬಿಡಲಾಗಿದೆ.
ಜಿಲ್ಲೆಯ ಪ್ರಮುಖ ಆರು ಅಣೆಕಟ್ಟುಗಳು ಭರ್ತಿಯಾಗುತ್ತಿವೆ. ನೀರಿನ ಒಳ ಹರಿವಿನ ಪ್ರಮಾಣವೂ ಹೆಚ್ಚಾಗುತ್ತಿದೆ. ಈ ಹಿನ್ನಲೆ ಕದ್ರಾ ಅಣೆಕಟ್ಟಿನಿಂದ ನೀರು ಹೊರ ಬಿಡಲಾಗಿದ್ದು, ಮುನ್ನಚ್ಚರಿಕಾ ಕ್ರಮವಾಗಿ ನೀರು ಹೊರಬಿಡಲಾಗಿದೆ. ಸದ್ಯ ಸೂಪಾ ಜಲಾಶಯ ಶೇ 95ರಷ್ಟು ಭರ್ತಿಯಾಗಿದೆ.
ಕದ್ರಾ ಜಲಾಶಯ ಗರಿಷ್ಠ ಮಟ್ಟ: 34.50 ಟಿಎಂಸಿ ಆಗಿದ್ದು, ಇಂದಿನ ಮಟ್ಟ: 30.00 ಟಿಎಂಸಿಯಷ್ಟಿದೆ. ಒಳಹರಿವು: 23,182 ಕ್ಯೂಸೆಕ್ ಹಾಗೂ ಹೊರ ಹರಿವು: 19,904 ಕ್ಯೂಸೆಕ್ ಇರುವುದರಿಂದ ನೀರನ್ನು ಹೊರಬಿಡಲಾಗಿದೆ.
ಕದ್ರಾ ಅಣೆಕಟ್ಟಿನಿಂದ ನೀರು ಹೊರಬಿಟ್ಟ ವಿಡಿಯೋ ಇಲ್ಲಿ ನೋಡಿ..
Discussion about this post