ಉತ್ತರ ಕನ್ನಡ ಸಂಸದರಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಒಂದು ವರ್ಷದ ಆಡಳಿತ ವೈಖರಿ ಹೇಗಿದೆ? ಎಂಬ ಪ್ರಶ್ನೆಗೆ ಒಟ್ಟು 56,600 ಜನ ಪ್ರತಿಕ್ರಿಯೆ ನೀಡಿದ್ದಾರೆ. ಆ ಪೈಕಿ ಶೇ 64.43ರಷ್ಟು ಜನ `ಅತ್ಯುತ್ತಮ’ ಎಂದು ಮತ ಚಲಾಯಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಆಗು-ಹೋಗುಗಳ ಬಗ್ಗೆ ಸಮಗ್ರ ಮಾಹಿತಿ ನೀಡುವ uknews9.com ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಕಾರ್ಯವೈಖರಿ ಬಗ್ಗೆ ಜನರ ಅಭಿಪ್ರಾಯಪಡೆಯುವುದಕ್ಕಾಗಿ ಜುಲೈ 3ರ ಮಧ್ಯಾಹ್ನ ಸಮೀಕ್ಷೆ ನಡೆಸಿತ್ತು. ಒಂದು ಮೊಬೈಲಿನಿಂದ ಒಮ್ಮೆ ಮಾತ್ರ ಮತ ಹಾಕುವ ಅವಕಾಶ ನೀಡಲಾಗಿದ್ದು, ಜುಲೈ 3ರ ರಾತ್ರಿ 10.30ರವರೆಗೆ `ಜನಮತ’ ವಿಭಾಗದಲ್ಲಿ ಜನ ಅಭಿಪ್ರಾಯಕ್ಕೆ ಅವಕಾಶ ನೀಡಲಾಗಿತ್ತು. ಒಟ್ಟು 10 ತಾಸಿನ ಅವಧಿಯಲ್ಲಿ 56,600 ಜನ ತಮ್ಮ ಮತ ಚಲಾವಣೆ ಮಾಡಿದ್ದರು.
ಮಧ್ಯಾಹ್ನ 2ಗಂಟೆಯ ವೇಳೆಗೆ ಭಾರೀ ವೇಗದಿಂದ ಮತ ಚಲಾವಣೆಯಾಗಿದ್ದು, ಆಗ ಕಾಗೇರಿಯವರು ಶೇ 75ರಷ್ಟು ಜನರಿಂದ `ಅತ್ಯುತ್ತಮ’ ಪ್ರಶಸ್ತಿಪಡೆದಿದ್ದರು. ಸಂಜೆ ವೇಳೆ ಮತ ಚಲಾಯಿಸುವವರ ಸಂಖ್ಯೆ ಇನ್ನಷ್ಟು ವೇಗಪಡೆದಿದ್ದು, ಈ ಅವಧಿಯಲ್ಲಿ ಕಾಗೇರಿಯವರ ಕಾರ್ಯವೈಖರಿಯ ಬಗ್ಗೆ `ಕನಿಷ್ಟ ಹಾಗೂ ಸಾಧಾರಣ’ ಎಂಬ ಕುರಿತಾಗಿ ಜನ ಅನಿಸಿಕೆ ಹಂಚಿಕೊ0ಡಿದ್ದರು. ನಡುವೆ `ಉತ್ತಮ’ ಎಂಬ ಆಯ್ಕೆಯನ್ನು ಆರಿಸಿ ಒಂದಷ್ಟು ಜನ ಮತ ಚಲಾಯಿಸಿದ್ದರು. ಹೀಗಾಗಿ ಜನರ ಮತದ ಅನ್ವಯವಾಗಿ ಶೇಕಡಾವಾರು ಪ್ರಮಾಣ ಏರಿಳಿತವಾಗುತ್ತಿದ್ದು, ಪೂರ್ವನಿಗಧಿತ ಸಮಯದಂತೆ ರಾತ್ರಿ 10.30ಕ್ಕೆ ಮತ ಚಲಾವಣೆ ಕಾರ್ಯ ಸ್ಥಗಿತಗೊಳಿಸಲಾಯಿತು. ಈ ವೇಳೆ ಅಂತಿಮ ಫಲಿತಾಂಶವೂ ಪ್ರಕಟವಾಗಿದ್ದು, ಕಾಗೇರಿ ಅವರು ಫಸ್ಟ್ ಕ್ಲಾಸಿನಲ್ಲಿ ಪಾಸಾಗಿದ್ದರು!
ಚಲಾವಣೆಯಾದ ಮತಗಳನ್ನು ವಿಶ್ಲೇಷಿಸಿದಾಗ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಬಹುತೇಕ ಜನರಿಂದ ಅತ್ಯುತ್ತಮ ಎಂದು ಗುರುತಿಸಿಕೊಂಡಿದ್ದರು. ಶೇ 64.43ರಷ್ಟು ಜನ `ಅತ್ಯುತ್ತಮ ಸಂಸದ’ ಎಂದು ಅನಿಸಿಕೆ ಹಂಚಿಕೊ0ಡಿದ್ದು, ಶೇ 11.07ರಷ್ಟು ಜನರು ಅವರ ಕಾರ್ಯವೈಖರಿ `ಉತ್ತಮ’ ಎಂಬ ಅಭಿಪ್ರಾಯವ್ಯಕ್ತಪಡಿಸಿದ್ದರು. ಶೇ 15.2ರಷ್ಟು ಜನ ಸಂಸದರ ಕೆಲಸವನ್ನು `ಕನಿಷ್ಟ’ ಎಂದು ಹೇಳಿಕೊಂಡಿದ್ದು, ಶೇ 9.49ರಷ್ಟು ಜನ `ಸಾಧಾರಣ’ ಎನ್ನುವ ಮೂಲಕ `ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇನ್ನಷ್ಟು ಕೆಲಸ ಮಾಡಬೇಕು’ ಎಂಬ ನಿಲುವು ತೋರ್ಪಡಿಸಿದ್ದರು.
`ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಂಸದರಾಗಿ ಆಯ್ಕೆ ಆದ ಮೇಲೆ ದೂರದೃಷ್ಠಿ ವಿಚಾರಗಳ ಯೋಜನೆ ರೂಪಿಸಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅವರ ಅತ್ಯುತ್ತಮ ಆಯ್ಕೆಗೆ ಮತ ನೀಡಿದೆ’ ಎಂದು ಅಂಕೋಲಾ ಕೊಡ್ಲಗದ್ದೆಯ ವಿ ಎಸ್ ಭಟ್ಟ ಜೋಗಿಮನೆ ಪ್ರತಿಕ್ರಿಯಿಸಿದರು. `ಕಾಗೇರಿ ಅವರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಆದರೆ, ಇನ್ನು ಉತ್ತಮವಾಗಿ ಕೆಲಸ ಮಾಡಬೇಕು ಎಂಬ ಕಾರಣದಿಂದ ಕೆಲವರು ಸಾಧಾರಣ ಎಂದು ಮತ ಚಲಾಯಿಸಿರಬಹುದು’ ಎಂದು ಹೊನ್ನಾವರದ ನಾಗರಾಜ ಶೆಟ್ಟಿ ಹೇಳಿದರು.
`ಜೊಯಿಡಾ-ಹಳಿಯಾಳದ ಕಡೆ ಕಾಗೇರಿ ಅವರು ಹೆಚ್ಚಿಗೆ ಪ್ರವಾಸ ಮಾಡಿಲ್ಲ. ಈ ಭಾಗದ ಅಭಿವೃದ್ಧಿಗೂ ಅವರು ಒತ್ತು ನೀಡಬೇಕು’ ಎಂದು ಸದಾನಂದ ಮಿರಾಶಿ ಒತ್ತಾಯಿಸಿದರು. `ಸೀಬರ್ಡ ಯೋಜನೆ ನಿರಾಶ್ರಿತರಿಗೆ ಪರಿಹಾರ ಕೊಡಿಸುವಲ್ಲಿ ಕಾಗೇರಿ ಅವರ ಕೊಡುಗೆ ದೊಡ್ಡದು. ಅಡಿಕೆ ವಿಮಾ ಪರಿಹಾರದ ವಿಷಯವಾಗಿ ಸಹ ಅವರು ಹೋರಾಟ ನಡೆಸಿದ್ದಾರೆ. ವಿರೋಧಿಗಳ ಮನಸ್ಸನ್ನು ಸಹ ಗೆಲ್ಲುವ ತಾಕತ್ತು ಕಾಗೇರಿ ಅವರಿಗಿದೆ. ಸಾಧಾರಣ ಹಾಗೂ ಕನಿಷ್ಠ ಎಂದು ಮತ ಚಲಾಯಿಸಿದವರು ಸಹ ಅತ್ಯುತ್ತಮ ಎಂದು ಎನ್ನುವ ಹಾಗೇ ಅವರು ಅಭಿವೃದ್ಧಿ ಮಾಡಿ ತೋರಿಸಬೇಕು’ ಎಂದು ಕಾರವಾರದ ಮಹಿಮಾ ನಾಯ್ಕ ಅನಿಸಿಕೆ ಹಂಚಿಕೊoಡರು.
Discussion about this post