ಮೇಷ ರಾಶಿ: ಹೊಸ ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಒಳ್ಳೆಯ ದಿನ. ಮಾನಸಿಕ ಒತ್ತಡ ಕಡಿಮೆಯಾಗಲಿದೆ. ಕುಟುಂಬದ ಜೊತೆ ಹೆಚ್ಚಿನ ಸಮಯವನ್ನು ಕಳೆಯುವಿರಿ.
ವೃಷಭ ರಾಶಿ: ಮಕ್ಕಳಿಂದ ಆರ್ಥಿಕ ಲಾಭ ಸಿಗಲಿದೆ. ಕೆಲಸದ ಬಗ್ಗೆ ಮೆಚ್ಚುಗೆ ಸಿಗಲಿದೆ. ದೂರ ಪ್ರಯಾಣ ಮಾಡುವ ಅವಕಾಶವಿದೆ.
ಮಿಥುನ ರಾಶಿ: ಧಾರ್ಮಿಕ ಹಾಗೂ ಆಧ್ಯಾತ್ಮಿಕ ಆಸಕ್ತಿಯನ್ನು ಬೆಳೆಸಿಕೊಳ್ಳಲು ಸಕಲಾ. ಭೂಮಿ, ವಸತಿ ಇನ್ನಿತರ ಸಮಸ್ಯೆಗಳ ಬಗ್ಗೆ ದೃಢ ನಿರ್ಧಾರ ಮಾಡಿ. ಯಾವುದೇ ಕಾರಣಕ್ಕೂ ಧೃತಿಗೆಡಬೇಡಿ. ಆತ್ಮವಿಶ್ವಾಸದಿಂದ ಇರಿ.
ಕರ್ಕಾಟಕ ರಾಶಿ: ಹೂಡಿಕೆಗೆ ಉತ್ತಮ ಲಾಭ ಸಿಗಲಿದೆ. ಆರೋಗ್ಯ ಸಮಸ್ಯೆ ದೂರವಾಗಲಿದೆ. ನಿಮ್ಮ ಭಾವನೆಗಳ ಜೊತೆ ಆಟವಾಡುವವರಿಂದ ದೂರವಿರಿ. ಭಾವನಾತ್ಮಕವಾಗಿ ಮೋಸ ಮಾಡುವ ಸಾಧ್ಯತೆಯಿದ್ದು, ಎಚ್ಚರಿಕೆಯಿಂದ ಇರಿ.
ಸಿಂಹ ರಾಶಿ: ಆರೋಗ್ಯದ ದೃಷ್ಟಿಯಿಂದ ನೀವು ಇಂದಿನ ದಿನ ವಿಶ್ರಾಂತಿ ಪಡೆಯುವುದು ಉತ್ತಮ. ಹಣಕ್ಕೆ ಸಂಬoಧಿಸಿದoತಹ ಸಮಸ್ಯೆ ಎದುರಾಗಬಹುದು. ಅಂದುಕೊoಡ ಕೆಲಸ ಮುಗಿಸಲು ಪ್ರಯತ್ನಿಸಿ.
ಕನ್ಯಾ ರಾಶಿ: ಭೂಮಿ ಖರೀದಿ ಹಾಗೂ ಮಾರಾಟಕ್ಕೆ ಉತ್ತಮ ದಿನ. ಕುಟುಂಬದ ಜೊತೆ ಸಮಯ ಕಳೆಯಿರಿ. ಕುಟುಂಬದ ಆಗು-ಹೋಗುಗಳಿಗೆ ಸ್ಪಂದಿಸಿ.
ತುಲಾ ರಾಶಿ: ಅನಿರೀಕ್ಷಿತ ಲಾಭ ಉಂಟಾಗಿ ನಿಮ್ಮ ಆರ್ಥಿಕ ವ್ಯವಸ್ಥೆ ಸುಧಾರಿಸಲಿದೆ. ಕೌಟುಂಬಿಕವಾಗಿ ಕಲಹ ಬರುವ ಸಾಧ್ಯತೆ ಇದೆ. ದೇವಾಲಯಗಳಿಗೆ ಭೇಟಿ ನೀಡುವುದು ಉತ್ತಮ.
ವೃಶ್ಚಿಕ ರಾಶಿ: ಇಂದಿನ ದಿನ ನಿಮಗೆ ಆತ್ಮಸ್ಥೈರ್ಯ ಮೂಡಲಿದೆ. ಹಣದ ಹೂಡಿಕೆ ವಿಚಾರದಲ್ಲಿ ಸ್ವಲ್ಪ ತಾಳ್ಮೆ ಇರಲಿ. ಆರೋಗ್ಯವೂ ಕೂಡ ಸುಧಾರಿಸಲಿದೆ.
ಧನು ರಾಶಿ: ದೈಹಿಕವಾಗಿ ಹಾಗೂ ಮಾನಸಿಕವಾಗಿ ಸ್ವಲ್ಪ ಸುಸ್ತಾಗಬಹುದು. ವಿಶ್ರಾಂತಿ ಪಡೆಯುವುದು ಉತ್ತಮ. ಹಣಕಾಸಿನ ವಿಷಯದಲ್ಲಿ ಸುಧಾರಣೆ ಆಗಲಿದೆ. ನಿಮಗೆ ಅಗತ್ಯವಿರುವಂತಹ ವಸ್ತುಗಳನ್ನ ಕೂಡ ಖರೀದಿಸುತ್ತೀರಿ.
ಮಕರ ರಾಶಿ: ವ್ಯಾಪಾರಸ್ಥರಿಗೆ ಲಾಭವಾಗುವ ಸಾಧ್ಯತೆ ಇದೆ. ಕುಟುಂಬದ ಜೊತೆ ಸಮಯ ಮೀಸಲಿಡಿ. ಯಾವುದೇ ವಿಷಯದಲ್ಲಿ ತಪ್ಪು ಕಲ್ಪನೆಗಳಲ್ಲಿ ಸಿಲುಕಬೇಡಿ.
ಕುಂಭ ರಾಶಿ: ಧ್ಯಾನ ಹಾಗೂ ಯೋಗದಿಂದ ನಿಮ್ಮ ದಿನವನ್ನು ಆರಂಭಿಸಿ. ಇದು ನಿಮ್ಮ ಆರೋಗ್ಯವನ್ನು ಹೆಚ್ಚಿಸುತ್ತದೆ. ಯಾವುದೇ ವಿಷಯದಲ್ಲಿ ಹಠವನ್ನು ಸಾಧಿಸಬೇಡಿ. ಹಠ ಸಾಧಿಸಿದರೆ ಕಲಹಕ್ಕೆ ಕಾರಣವಾಗುವ ಸಾಧ್ಯತೆ ಹೆಚ್ಚಿದೆ.
ಮೀನ ರಾಶಿ: ಆಶಾವಾದಿಯಾಗಿರಲು ನಿಮ್ಮನ್ನು ನೀವೇ ಪ್ರೇರೇಪಿಸಿಕೊಳ್ಳಿ. ನಕಾರಾತ್ಮಕ ಭಾವನೆಗೆ ಅವಕಾಶ ಕಲ್ಪಿಸಬೇಡಿ. ಅನುಪಯುಕ್ತವಾದಂತಹ ವಾದಗಳನ್ನು ಮಾಡಬೇಡಿ. ಜನರ ಜೊತೆ ಸೌಜನ್ಯದಿಂದ ವರ್ತಿಸದೇ ಇದ್ದರೆ ಕಷ್ಟದ ಸಮಯ ಬರಬಹುದು. ಆರೋಗ್ಯದ ಕಡೆಯೂ ಜೋಪಾನ.
Discussion about this post