ಜೋಯಿಡಾ: ಕಾನೇರಿ ಸೇತುವೆಯ 100ಮೀ ದೂರದಲ್ಲಿ ರಸ್ತೆ ನಡುವೆ ಹೊಂಡವಿದ್ದು, 10 ವರ್ಷ ಕಳೆದರೂ ಆ ಹೊಂಡ ಮುಚ್ಚಲು ಲೋಕೋಪಯೋಗಿ ಇಲಾಖೆ ಆಸಕ್ತಿವಹಿಸಿಲ್ಲ. ಈ ರಸ್ತೆಯಲ್ಲಿ ಇಂಥ ಹೊಂಡಗಳು ನೂರಾರು!
ಪ್ರಸ್ತುತ ಹೊಂಡದ ಅಪಾಯ ತಪ್ಪಿಸುವುದಕ್ಕಾಗಿ ಆ ಭಾಗದವರು ಮರದ ತುಂಡು ಅಳವಡಿಸಿದ್ದಾರೆ. ಪ್ರತಿ ಮಳೆಗಾಲದಲ್ಲಿ ಹೊಂಡದ ಮಣ್ಣು ಕೊಚ್ಚಿ ಹೋಗುತ್ತದೆ. ಇದರಿಂದ ಹೊಂಡದ ಆಳ ಹಾಗೂ ಅಗಲ ಹೆಚ್ಚಾಗುತ್ತಲೇ ಇದೆ. ಈ ಬಗ್ಗೆ ತಿಳಿಸಿದರೂ ಕ್ರಮ ಕೈಗೊಂಡವರಿಲ್ಲ ಎಂಬುದು ಆ ಭಾಗದ ಜನರ ದೂರು.
ರಸ್ತೆಗೆ ಅಡ್ಡಲಾಗಿ ಪೈಪ್ ಅಳವಡಿಸಿದರೆ ಅಪಾಯ ತಪ್ಪಿಸಬಹುದಾದರೂ ಪೈಪ್ ಅಳವಡಿಸುವವರು ಯಾರು? ಎಂಬ ಪ್ರಶ್ನೆ ಹಾಗೇ ಉಳಿದಿದೆ. ಎರಡು ಬದಿಯಿಂದ ವಾಹನ ಬಂದರೆ ಇಲ್ಲಿ ಅಪಘಾತ ನಿಶ್ಚಿತ. ರಾತ್ರಿ ವೇಳೆ ಹೊಂಡದಲ್ಲಿ ಬಿದ್ದರೆ ಕೈ ಕಾಲು ಮುರಿಯುವುದು ಸಹ ಖಚಿತ.