ಕಾರವಾರ: ಕಾರ್ಮಿಕ ಕಾಯ್ದೆ ನಿಯಮದ ಪ್ರಕಾರ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಕೆಲಸ ಮಾಡುವ ಹೊರಗುತ್ತಿಗೆ ನೌಕರರಿಗೆ ಸೌಲಭ್ಯ ಒದಗಿಸಬೇಕು ಎಂದು ಅಲ್ಲಿನ ಕಾರ್ಮಿಕರು ಪ್ರತಿಭಟಿಸಿ, ಮನವಿ ಸಲ್ಲಿಸಿದ್ದಾರೆ.
ಕ್ರಿಮ್ಸ್ ನಲ್ಲಿ ಡಿ ದರ್ಜೆ ನೌಕರರು, ನಾನ್ ಕ್ಲಿನಿಕಲ್ ಸಿಬ್ಬಂದಿ, ಡೇಟಾ ಎಂಟ್ರಿ ಆಪರೇಟರ್, ಡ್ರೈವರ್. ಸೆಕ್ಯುರಿಟಿ ಗಾರ್ಡ್, ಲ್ಯಾಬ್ ಟೆಕ್ನಿಶಿಯನ್, ಇಲೆಕ್ನಿಶಿಯನ್ ಸೇರಿ 100ಕ್ಕೂ ಅಧಿಕ ಜನ ದುಡಿಯುತ್ತಿದ್ದಾರೆ. 15 ವರ್ಷದಿಂದ ಕೆಲಸ ಮಾಡುತ್ತಿದ್ದವರಿಗೂ 11 ಸಾವಿರ ರೂ ವೇತನ ದೊರೆಯುತ್ತಿದೆ. ಅದೂ ಸಹ ಪ್ರತಿ ತಿಂಗಳು ಸಿಗುತ್ತಿಲ್ಲ. ಪಿಎಫ್, ಇಎಸ್ಐ ಸೌಲಭ್ಯಗಳನ್ನು ನೀಡದೇ ವಂಚಿಸಲಾಗಿದೆ ಎಂದು ದೂರಿದರು. ಕನಿಷ್ಠ ವೇತನ ಕೊಡಿಸಬೇಕು. ಪಿಎಫ್, ಇಎಸ್ಐ ಔಲಭ್ಯ ಕೊಡಿಸಬೇಕು. ಮಾಸಿಕ ಸರಿಯಾದ ವೇಳೆಗೆ ವೇತನ ಪಾವತಿಸುವಂತಾಗಬೇಕು ಎಂದು ಆಗ್ರಹಿಸಿದರು.