ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜೊಯಿಡಾದ ಆನಮೋಡದಲ್ಲಿ ಮಳೆಯಿಂದಾಗಿ ಭೂ ಕುಸಿತವಾಗಿದೆ. ಹೀಗಾಗಿ ಈ ಮಾರ್ಗದ ಓಡಾಟ ತೀರಾ ಅಪಾಯಕಾರಿ.
ಆನಮೋಡು ಘಟ್ಟ ಪ್ರದೇಶದಲ್ಲಿನ ರಸ್ತೆ ಕುಸಿತಿದೆ. ಇನ್ನಷ್ಟು ಕುಸಿಯುವ ಸಾಧ್ಯತೆ ಇಲ್ಲಿರುವುದರಿಂದ ವಾಹನ ಸಂಚರಿಸದ ಹಾಗೇ ತಡೆಗೋಡೆ ಹಾಕಲಾಗಿದೆ. ಜೊಯಿಡಾ ತಾಲೂಕಿನ ರಾಮನಗರದಿಂದ ಗೋವಾ ಹೋಗುವ ಮಾರ್ಗದಲ್ಲಿ ಶುಕ್ರವಾರ ಬಿರುಕು ಕಾಣಿಸಿಕೊಂಡಿದ್ದು, ಶನಿವಾರ ಬೆಳಗ್ಗೆ ರಸ್ತೆ ಕುಸಿದಿದೆ.
ಗೋವಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕರ್ನಾಟಕದ ಅಧಿಕಾರಿಗಳು ಅಲ್ಲಿಯೇ ಇದ್ದು ಸುರಕ್ಷತಾ ಕ್ರಮ ಅನುಸರಿಸಿದ್ದಾರೆ. ಈ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ವಾಹನಗಳಿಗೆ ತಡೆ ಹಿಡಿಯಲಾಗಿದ್ದು, ಬದಲಿ ಮಾರ್ಗದ ಮೂಲಕ ತೆರಳಲು ಜಿಲ್ಲಾಡಳಿತ ಸೂಚಿಸಿದೆ. ಅದಾಗಿಯೂ ಕೆಲ ವಾಹನ ಸವಾರರು ಅದೇ ಮಾರ್ಗ ಬಳಸುತ್ತಿದ್ದಾರೆ. ಅವರಿಗೆ ಪೊಲೀಸರು ಸ್ಥಳದಲ್ಲಿಯೇ ಬುದ್ದಿ ಹೇಳಿ ಕಳುಹಿಸುತ್ತಿದ್ದಾರೆ.
ರಸ್ತೆ ಕುಸಿತದ ವಿಡಿಯೋ ಇಲ್ಲಿ ನೋಡಿ..
