ಮೇಷ ರಾಶಿ: ಈ ದಿನ ನಿಮಗೆ ಹೊಸ ಹೊಸ ಜವಾಬ್ದಾರಿ ಬರಲಿದೆ. ಸಹೋದ್ಯೋಗಿಗಳಿಂದ ಬೆಂಬಲವೂ ಸಿಗಲಿದೆ. ಆರೋಗ್ಯದಲ್ಲಿ ನಿರ್ಲಕ್ಷ ಬೇಡ.
ವೃಷಭ ರಾಶಿ: ಈ ದಿನ ನೀವು ತಾಳ್ಮೆಯಿಂದ ವರ್ತಿಸುವುದು ಬಹಳ ಮುಖ್ಯ. ಹೊಸ ಉದ್ಯೋಗ ಮಾಡಲಿಚ್ಚಿಸುವವರಿಗೆ ಒಳ್ಳೆಯ ದಿನ. ದೊಡ್ಡ ಹೂಡಿಕೆ, ಹಣಕಾಸಿನ ವಿಷಯದಲ್ಲಿ ಎಚ್ಚರವಹಿಸಿ.
ಮಿಥುನ ರಾಶಿ: ಹಣದ ವ್ಯವಹಾರದಲ್ಲಿ ತಾಳ್ಮೆಯಿಂದ ನಿರ್ಧಾರವನ್ನು ತೆಗೆದುಕೊಳ್ಳಿ. ದೂರದ ಪ್ರಯಾಣದ ಅವಕಾಶ ಬರಬಹುದು. ಹೃದಯ ಸಂಬoಧಿ ಕಾಯಿಲೆ ಹೊಂದಿರುವoಥವರು ಎಚ್ಚರಿಕೆಯಿಂದ ಇರಬೇಕು.
ಕರ್ಕಾಟಕ ರಾಶಿ: ಇಂದಿನ ದಿನ ನಿಮ್ಮ ಎಲ್ಲಾ ನಿರ್ಧಾರಗಳು ಪ್ರಭಾವಶಾಲಿಯಾಗಿರಲಿದೆ. ಹಣಕಾಸಿನ ಉಳಿತಾಯದ ಬಗ್ಗೆ ಗಮನ ನೀಡಿ. ಅನಗತ್ಯ ವೆಚ್ಚ ಬೇಡ.
ಸಿಂಹ ರಾಶಿ: ಆತ್ಮವಿಶ್ವಾಸ ಅಧಿಕವಾಗಿರಲಿದೆ. ಮಿತಿಮೀರಿ ಹಣವನ್ನು ವ್ಯಯ ಮಾಡಬೇಡಿ. ಹಣವನ್ನ ವ್ಯಯ ಮಾಡಿದ್ದಲ್ಲಿ ಚಿಂತೆಗೆ ಒಳಗಾಗುತ್ತೀರಿ.
ಕನ್ಯಾ ರಾಶಿ: ನೀವು ಅಂದುಕೊoಡ ಯೋಜನೆಯ ಪ್ರಕಾರ ಎಲ್ಲವೂ ಸುಗಮವಾಗಿ ಸಾಗಲಿದೆ. ಹೊಸ ಸ್ನೇಹಿತರ ಪರಿಚಯವಾಗಬಹುದು.
ತುಲಾ ರಾಶಿ: ನಿಮ್ಮ ನಿರ್ಧಾರ ಸ್ಪಷ್ಟವಾಗಿರಬೇಕು. ಎಷ್ಟೇ ಟೀಕೆಗಳು ಎದುರಾದರೂ ತಾಳ್ಮೆಯಿಂದ ಇರಬೇಕು. ಮನೆಗೆ ಸಂಬoಧಿಸಿದoತೆ ಖರ್ಚು ಎದುರಾಗಲಿದೆ. ಎಲ್ಲವನ್ನು ಕೂಡ ತಾಳ್ಮೆಯಿಂದ ನಿಭಾಯಿಸಿ.
ವೃಶ್ಚಿಕ ರಾಶಿ: ಇಂದು ನಿಮ್ಮ ಆಂತರಿಕ ಶಕ್ತಿ ಜಾಗೃತ ಆಗಲಿದೆ. ವ್ಯವಹಾರದಲ್ಲಿ ಪ್ರಗತಿ ಆಗಲಿದೆ. ಉದ್ಯೋಗದಲ್ಲಿ ಒತ್ತಡ ಬರಲಿದೆ.
ಧನು ರಾಶಿ: ಧೈರ್ಯದಿಂದ ಮುಂದೆ ಸಾಗಿ. ಆದರೆ, ಅನವಶ್ಯಕ ಮಾತುಗಳಿಂದ ದೂರವಿರಿ. ಇಂದಿನ ದಿನ ನಿಮ್ಮ ನಿಲುವು ಸ್ಪಷ್ಟವಾಗಿರಲಿ. ಮಕ್ಕಳಿಂದ ಒಳ್ಳೆಯ ಸುದ್ದಿಯನ್ನು ಪಡೆಯುತ್ತೀರಿ.
ಮಕರ ರಾಶಿ: ತುಂಬಾ ದಿನದಿಂದ ಬಾಕಿ ಉಳಿದಂತಹ ಕೆಲಸ ಈ ದಿನ ಮುಕ್ತಾಯವಾಗಲಿದೆ. ಹಣಕಾಸಿನ ಸಮಸ್ಯೆಯೂ ಕೂಡ ಬಗೆಹರಿಯಲಿದೆ.
ಕುಂಭ ರಾಶಿ: ಇಂದಿನ ದಿನ ನಿಮಗೆ ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಅಪರಿಚಿತ ಜನರನ್ನ ನಂಬಬೇಡಿ. ಹೂಡಿಕೆಯನ್ನು ಮಾಡುವಾಗ ನೂರು ಬಾರಿ ಯೋಚಿಸಿ.
ಮೀನ ರಾಶಿ: ಆದಾಯದ ಪರಿಸ್ಥಿತಿ ಸುಧಾರಿಸಲಿದೆ. ನೀವು ಕೆಲಸದಲ್ಲಿ ಯಶಸ್ಸು ಪಡೆಯುತ್ತೀರಿ. ಸಾಲದಿಂದ ಬಳಲುತ್ತಿರುವವರಿಗೆ ಹೊಸ ದಾರಿ ಕಾಣಲಿದೆ.
Discussion about this post