ಶಿರಸಿಯ ಕೆರೆಗುಂಡಿ ರಸ್ತೆ ಅಂಚಿನಲ್ಲಿದ್ದ ಮನೆ ಕಳ್ಳತನದ ಆರೋಪಿ ಸಿಕ್ಕಿಬಿದ್ದಿದ್ದು, ಆತನನ್ನು ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ. ಶಿರಸಿ ಮೂಲದ ಖಾಲಿದ್ ಶರೀಪಸಾಬ್ ಕನವಳ್ಳಿ ಬಂಧಿತ ಆರೋಪಿ.
ಶಿರಸಿ ಕರೆಗುಂಡಿ ರಸ್ತೆಯಂಚಿನಲ್ಲಿರುವ ಮನೆಯೊಂದರಲ್ಲಿ ಕಳ್ಳತನ ನಡೆದಿತ್ತು. ಮನೆ ಬಾಗಿಲು ಮುರಿದ ಖಾಲಿದ್ ಶರೀಪಸಾಬ್ ಕನವಳ್ಳಿ ಮನೆಯೊಳಗಿದ್ದ 85 ಸಾವಿರ ರೂ ಹಣ ಎಗರಿಸಿದ್ದರು. ಜೊತೆಗೆ 60 ಸಾವಿರ ರೂ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಮಾರುಕಟ್ಟೆ ಪೊಲೀಸರು ಸಾಕಷ್ಟು ಶೋಧ ನಡೆಸಿದ ನಂತರ ಖಾಲಿದ್ ಶರೀಪಸಾಬ್ ಕನವಳ್ಳಿ ಸಿಕ್ಕಿ ಬಿದ್ದರು.
ಶಿರಸಿ ತಾಲೂಕಿನ ಆರೆಕೊಪ್ಪ ಮೂಲದ ಖಾಲಿದ್ ಶರೀಪಸಾಬ್ ಕನವಳ್ಳಿ ಸದ್ಯ ಇಂದಿರಾ ನಗರದಲ್ಲಿ ವಾಸವಾಗಿದ್ದರು. ಅಪರೂಪಕ್ಕೆ ಒಮ್ಮೆ ಕಳ್ಳತನ ಮಾಡುವುದನ್ನು ರೂಢಿಸಿಕೊಂಡಿದ್ದರು. ಮುಖ್ಯವಾಗಿ ಬಡವರು ಹಾಗೂ ಮಧ್ಯಮ ವರ್ಗದವರ ಮನೆಯನ್ನು ಗುರಿಯಾಗಿರಿಸಿಕೊಂಡು ದೋಚುತ್ತಿದ್ದರು.
ಸದ್ಯ ಕಳ್ಳತನ ಪ್ರಕರಣದಲ್ಲಿ ಸಿಕ್ಕಿಬಿದ್ದ ಆರೋಪಿ ಬಳಿಯಿದ್ದ ಮೂರು ಸ್ಕೂಟಿಯನ್ನು ಪೊಲೀಸರು ವಶಕ್ಕೆಪಡೆದಿದ್ದಾರೆ. ಆ ಮೂರು ಸ್ಕೂಟಿಯ ದಾಖಲಾತಿಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ. ಡಿವೈಎಸ್ಪಿ ಗೀತಾ ಪಾಟೀಲ್. ಪಿಐ ಶಶಿಕಾಂತ ವರ್ಮಾ, ಪಿಎಸ್‌ಐ ರಾಜಕುಮಾರ ಉಕ್ಕಲಿ, ರತ್ನಾ ಕುರಿ, ಪೊಲೀಸ್ ಸಿಬ್ಬಂದಿ ಬಸವರಾಜ ಮ್ಯಾಗೇರಿ, ಮಂಜುನಾಥ ಕೆಂಚರೆಡ್ಡಿ, ಪ್ರಸಾದ,ಸಂದೀಪ ನಿಂಬಾಯಿ, ರಾಕೇಶ ಎನ್ ಎಚ್, ನರೇಂದ್ರ ಎನ್, ದಯಾನಂದ, ದರ್ಶನ ಹಾಗೂ ಖಾದರ್ ಕಳ್ಳನನ್ನು ಹಿಡಿದಿದ್ದಾರೆ.
