ಗಂಗಾವಳಿ ನದಿಯಲ್ಲಿ ಕಲಗ ತೆಗೆಯಲು ಇಳಿದಿದ್ದ ಕಮಲಾ ಅಂಬಿಗ ಅವರು ನೀರಿನ ಸೆಳೆತಕ್ಕೆ ಸಿಲುಕಿ ಸಾವನಪ್ಪಿದ್ದಾರೆ.
ಅಂಕೋಲಾ ಬಳಿಯ ಸಡಗೇರಿಯ ಕಮಲಾ ಅಂಬಿಗ ಅವರು ಮೀನುಗಾರಿಕೆ ನೆಚ್ಚಿಕೊಂಡಿದ್ದರು. ಮೊನ್ನೆ ಅವರು ಗಂಗಾವಳಿ ನದಿಯಲ್ಲಿ ಕಲಗ ತೆಗೆಯಲು ಹೋಗಿದ್ದರು. ನದಿ ಅಂಚಿನಲ್ಲಿರುವಾಗ ಕಾಲು ಜಾರಿ ನೀರಿಗೆ ಬಿದ್ದರು.
ಆ ದಿನ ಸಾಕಷ್ಟು ಹುಡುಕಾಟ ನಡೆಸಿದರೂ ಅವರು ಸಿಗಲಿಲ್ಲ. ಮರುದಿನ ಗಂಗಾವಳಿ ಗ್ರಾಮದ ಧಕ್ಕೆಯ ಬಳಿ ಕಮಲಾ ಅಂಬಿಗ ಅವರ ಶವ ಸಿಕ್ಕಿತು. ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಗೋಕರ್ಣ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
