ಶಿರಸಿ: 2015ರ ನಂತರ ನಡೆದ ಎಲ್ಲಾ ಅತಿಕ್ರಮಣ ತೆರವಿಗೆ ರಾಜ್ಯ ಅರಣ್ಯ ಸಚಿವ ಈಶ್ವರ ಖಂಡ್ರೆ ಆದೇಶಿಸಿದ್ದು, ಈ ಕ್ರಮವನ್ನು ಬಿಜೆಪಿ ಜಿಲ್ಲಾ ವಕ್ತಾರ ಸದಾನಂದ್ ಭಟ್ ನಿಡುಗೋಡ್ ಖಂಡಿಸಿದ್ದಾರೆ. ಯಾವುದೇ ವೈಜ್ಞಾನಿಕ ಹಿನ್ನಲೆ ಇಲ್ಲದೇ ಸಚಿವರು ಈ ಆದೇಶ ಹೊರಡಿಸಿರುವುದಾಗಿ ಅವರು ಹೇಳಿಕೆ ನೀಡಿದ್ದಾರೆ.
ಭಾರೀ ಮಳೆಯಿಂದ ಜನ ತೊಂದರೆಯಲ್ಲಿದ್ದಾರೆ. ಹೀಗಿರುವಾಗ ಇಂಥ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ. ಇದರಿಂದ ಪಶ್ಚಿಮ ಘಟ್ಟ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಅತಿಕ್ರಮಣದಾರರಿಗೆ ಮತ್ತು ಪ್ರವಾಸೋದ್ಯಮದ ಮೂಲಕ ಜೀವನ ನಡೆಸುತ್ತಿರುವ ಜನರಿಗೆ ಅನ್ಯಾಯವಾಗಲಿದೆ ಎಂದವರು ಹೇಳಿದ್ದಾರೆ.
ಅಗಸ್ಟ್ 2ರಂದು ಅರಣ್ಯ ಸಚಿವರು ಮಾಡಿದ ಆದೇಶದ ಸುದ್ದಿ ಇಲ್ಲಿ ಓದಿ..
https://sirinews.in/forestorder/